ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಪಾಂಚೋಲಿ ಹೆಸರು ಶಿಫಾರಸು; ನ್ಯಾ.ಬಿ.ವಿ.ನಾಗರತ್ನ ವಿರೋಧ| Justice B.V.Nagaratna

B V Nagarathna
Published on

Justice B.V.Nagaratna: ಪ್ರಸ್ತುತ ಪಾಟ್ನಾ ಹೈಕೋರ್ಟ್ ಮುಖ್ಯ​ ನ್ಯಾಯಮೂರ್ತಿಗಳಾಗಿರುವ ವಿಫುಲ್.ಎಂ.ಪಾಂಚೋಲಿಯವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಕೋಲ್ಜಿಯಂ ಶಿಫಾರಸು ಮಾಡಿದ್ದು, ಅದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ವಿರ್ರೋಧ ವ್ಯಕ್ತಡಿಸಿದ್ದಾರೆ ಎಂದು ವರದಿಯಾಗಿದೆ.

ಸಿಜೆಐ ಬಿ.ಆರ್. ಗವಾಯಿ ಸೇರಿ ಐವರು ನೇತೃತ್ವದ ಕೊಲ್ಜಿಯಂ ಸೋಮವಾರ (ಆಗಸ್ಟ್ 25) 4-1 ರ ಬಹುಮತದೊಂದಿಗೆ ನ್ಯಾ. ಪಾಂಚೋಲಿ ಮತ್ತು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರನ್ನು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾಗಿ ಶಿಫಾರಸು ಮಾಡಿದೆ. ಅದೇ ಐವರ ಸದಸ್ಯರಲ್ಲಿ ಒಬ್ಬರಾಗಿರುವ ನ್ಯಾ.ನಾಗರತ್ನ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪಾಂಚೋಲಿಯವರ ಶಿಫಾರಸು, ನ್ಯಾಯದ ಆಡಳಿತಕ್ಕೆ ವಿರುದ್ಧವಾಗಿದೆ. ಇದು ಕೊಲ್ಜಿಯಂ ವ್ಯವಸ್ಥೆಯ ವಿಶ್ವಾಸರ್ಹತೆಗೆ ಧಕ್ಕೆ ತರುತ್ತದೆ. ಪಾಂಚೋಲಿಯವರನ್ನು ನೇಮಕ ಮಾಡಿದ್ರೆ ಅವರು 2031 ರಿಂದ 2033ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸುವ ಸಾಧ್ಯತೆ ಇದೆ. ಇದು ಸಂಸ್ಥೆಯ ದೀರ್ಘಕಾಲಿನ ಹಿತಾಸಕ್ತಿಗೆ ಸರಿಹೊಂದುವುದಿಲ್ಲ ಎಂದು ನ್ಯಾ.ಬಿ.ವಿ.ನಾಗರತ್ನ ವಾದಿಸಿದ್ದಾರೆ ಎನ್ನಲಾಗಿದೆ.

ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ ಅಂಡ್ ರಿಫಾರ್ಮ್ಸ್ (ಸಿಜೆಎಆರ್) ಸೇರಿದಂತೆ ಇತರರು ಈ ಭಿನ್ನಾಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಕೊಲಿಜಿಯಂನ ಶಿಫಾರಸಿನಲ್ಲಿ ಪಾರದರ್ಶಕತೆಯ ಕೊರತೆಯನ್ನು ಟೀಕಿಸಿದ್ದಾರೆ. ನಾಗರತ್ನ ಅವರ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.

ಪಾಂಚೋಲಿ ನೇಮಕ ವಿರೋಧ ಒಟ್ಟು ಮೂರು ಕಾರಣ

ಹಿರಿತನ; ನ್ಯಾ. ಪಂಚೋಲಿ ರಾಷ್ಟ್ರೀಯ ಹೈಕೋರ್ಟ್ ನ್ಯಾಯಾಧೀಶರ ಹಿರಿಯತೆಯ ಪಟ್ಟಿಯಲ್ಲಿ 57ನೇ ಸ್ಥಾನದಲ್ಲಿದ್ದಾರೆ. ಅವರ ನೇಮಕದಿಂದ ಹಲವಾರು ಹಿರಿಯ ಮತ್ತು ಯೋಗ್ಯ ನ್ಯಾಯಾಧೀಶರನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ.

ಗುಜರಾತ್‌ನಿಂದ ಅತಿಯಾದ ಪ್ರಾತಿನಿಧ್ಯ: ಗುಜರಾತ್ ಹೈಕೋರ್ಟ್‌ನಿಂದ ಇತ್ತೀಚೆಗೆ ನ್ಯಾ. ಎನ್.ವಿ. ಅಂಜಾರಿಯಾ ಅವರನ್ನು ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿತ್ತು. ಬಳಿಕ ಈಗ ಪಂಚೋಲಿ ಅವರ ಶಿಫಾರಸು ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್‌ನಿಂದ ಮೂವರು ನ್ಯಾಯಾಧೀಶರಿಗೆ ಅವಕಾಶ ನೀಡಿದಂತಾಗುತ್ತದೆ. (ಜೆ.ಬಿ. ಪರ್ದಿವಾಲಾ, ಅಂಜಾರಿಯಾ, ಮತ್ತು ಪಂಚೋಲಿ) ಇದು ಇತರ ರಾಜ್ಯದ ಹೈಕೋರ್ಟ್‌ ನ್ಯಾಯಾಧೀಶರ ಕಡಗಣಿಸದಂತಾಗಿ ಅಸಮಾನ ಪ್ರಾತಿನಿಧ್ಯವನ್ನು ತೋರಿಸುತ್ತದೆ ಎಂದಿದ್ದಾರೆ.

ಗುಜರಾತ್‌ನಿಂದ ಪಾಟ್ನಾಕ್ಕೆ ವರ್ಗಾವಣೆ: ಪಾಂಚೋಲಿಯವರನ್ನು 2023 ರ ಜುಲೈನಲ್ಲಿ ಗುಜರಾತ್‌ನಿಂದ ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ನಿಯಮದಂತೆ ನಡೆದಿಲ್ಲ ಎಂದು ಹೇಳಿದ್ದಾರೆ. ಈ ವರ್ಗಾವಣೆಯ ಗುಪ್ತ ದಾಖಲೆಗಳನ್ನು ಪರಿಶೀಲಿಸಬೇಕೆಂದು ಕೊಲ್ಜಿಯಂನಲ್ಲಿ ಒತ್ತಾಯಿಸಿದ್ದಾರೆ.

ನ್ಯಾಯಮೂರ್ತಿ ಆಗಿರುವ ಬಿ.ವಿ.ನಾಗರತ್ನ ಅವರು ಕರ್ನಾಟದ ಮಂಡ್ಯ ಜಿಲ್ಲೆಯ ಪಾಂಡವಪುರದವರು. 2021ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿರುವ ಅವರು, ಸೆಪ್ಟೆಂಬರ್ 2027ರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net