'ರಾಹುಲ್ ಗಾಂಧಿ ಡ್ರಾಮಾ ಮಾಡೋಕೆ ನಾಳೆ ಪಂಜಾಬ್​ಗೆ ಬರ್ತಿದ್ದಾರೆ'!!

Rahul Gandhii 11 March 20
Published on

ಚಂಡೀಗಢ: ಕೃಷಿ ಮಸೂದೆಗಳನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಅವರ ಪ್ರಾಯೋಜಕತ್ವದಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಏತನ್ಮಧ್ಯೆ, 'ರಾಹುಲ್ ಗಾಂಧಿ ಡ್ರಾಮಾ ಮಾಡೋಕೆ ನಾಳೆ ಪಂಜಾಬಿಗೆ ಬರ್ತಿದ್ದಾರೆ' ಎಂಬ ಹೇಳಿಕೆಯೊಂದು ದೇಶದ ಗಮನಸೆಳೆದಿದೆ.

ಕೃಷಿ ಮಸೂದೆಗಳಿಗೆ ಸಂಬಂಧಿಸಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಹೊರಬಿದ್ದಿರುವ ಶಿರೋಮಣಿ ಅಕಾಲಿದಳ ಪಂಜಾಬ್​ನಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಎರಡು ದಿನಗಳ ಹಿಂದಷ್ಟೇ ಪ್ರತಿಭಟನೆ ನಡೆಸಿ ಬಂಧನಕ್ಕೂ ಒಳಗಾಗಿದ್ದಾರೆ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್​ ಸಿಂಗ್ ಬಾದಲ್​. ಶಿರೋಮಣಿ ಅಕಾಲಿದಳ ಪಂಜಾಬಿನಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ಮುಂದುವರಿಸಿದೆ.

ಇದರ ನಡುವೆ, ಕಾಂಗ್ರೆಸ್ ಪ್ರತಿಭಟನೆ ಪಂಜಾಬ್​ನಲ್ಲಿ ಶಿರೋಮಣಿ ಅಕಾಲಿದಳದವರ ಕಣ್ಣುಕೆಂಪಾಗಿಸಿದೆ. ಹೀಗಾಗಿ, ಸುಖಬೀರ್ ಸಿಂಗ್ ಬಾದಲ್​ ಅವರು ರಾಹುಲ್ ಗಾಂಧಿ ಆಗಮನಕ್ಕೆ ಟಾಂಗ್ ನೀಡಿದ್ದು ಹೀಗೆ- ಡ್ರಾಮಾ ಮಾಡೋದಕ್ಕೆ ರಾಹುಲ್ ಗಾಂಧಿ ನಾಳೆ ಪಂಜಾಬ್​ಗೆ ಬರ್ತಿದ್ದಾಋಎ. ಕಾಂಗ್ರೆಸ್ ಪಕ್ಷ ಈ ಕೃಷಿ ಕಾನೂನಿನ ಬಗ್ಗೆ ಸಂವಾದ ಆರಂಭಿಸಿದೆ. ಇದೇ ಪಕ್ಷದವರು ತಮ್ಮ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಖಾಸಗಿ ಮಂಡಿ ಆರಂಭಿಸುವುದಕ್ಕೆ ಅನುಕೂಲ ಮಾಡಿಕೊಡ್ತೇವೆ ಅಂತ ಹೇಳಿಕೊಂಡಿದ್ರು ಅನ್ನೋದನ್ನು ಮರೆಯಬೇಡಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net