More

    ಬುರ್ಜ್ ಖಲೀಫಾ ಕಟ್ಟಡ ನಿರ್ಮಿಸಿದ್ದ ಕಂಪನಿ ದಿವಾಳಿ: ಸಾವಿರಾರು ಉದ್ಯೋಗಿಗಳು ಬೀದಿಗೆ!

    ರಿಯಾಧ್: ಬುರ್ಜ್ ಖಲೀಫಾ ಯಾರಿಗೆ ಗೊತ್ತಿಲ್ಲ? ಜಗತ್ತಿನಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಅದರದು. ಅದನ್ನು ನಿರ್ಮಿಸಿ ಇಡೀ ವಿಶ್ವದ ಗಮನ ಸೆಳೆದಿದ್ದ ಅರಬ್ ಟೆಕ್ ಹೋಲ್ಡಿಂಗ್ಸ್ ಎಂಬ ಬೃಹತ್ ಕಂಪನಿ ಈಗ ಕರೊನಾ ಹಾವಳಿಯಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ ಎದ್ದಿದೆ. ಇದನ್ನೂ ಓದಿ:‘ಗೌರಮ್ಮನ ಮಾತಿನ ಹಿಂದೆ ಮುನಿರತ್ನ ಇದ್ದಾರೆ..ನಾವಿನ್ನು ಸುಮ್ಮನೆ ಕೂರೋದಿಲ್ಲ: ಡಿ.ಕೆ.ರವಿ ಮಾವನ ಆಕ್ರೋಶ

    ಲಿಕ್ವಿಡೇಷನ್‌ಗೆ ಅರ್ಜಿ ಸಲ್ಲಿಸಲು ಕಂಪನಿ ನಿರ್ಧರಿಸಿದ್ದು, ಅದಕ್ಕೆ ಪಾಲುದಾರರ ಒಪ್ಪಿಗೆಯೂ ದೊರೆತಿದೆ. ಕರೊನಾ ಹಾವಳಿಯಿಂದಾಗಿ ಸೌದಿ ಅರೇಬಿಯಾದಲ್ಲಿರುವ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಬಹುತೇಕ ಕಂಪನಿಗಳು ಇದೇ ಸ್ಥಿತಿ ಎದುರಿಸುತ್ತಿವೆ. ಅರಬ್ ಟೆಕ್ ಕಂಪನಿಯೊಂದರಲ್ಲೇ ದಿವಾಳಿ ಅರ್ಜಿ ಸಲ್ಲಿಸುವ ನಿರ್ಧಾರದಿಂದಾಗಿ ಸುಮಾರು 40 ಸಾವಿರ ನೌಕರರು ಬೀದಿಗೆ ಬೀಳಲಿದ್ದಾರೆ. ಅವರ ಜೀವನ ಅತಂತ್ರವಾಗಲಿದೆ. ಅಷ್ಟೇ ಅಲ್ಲ, ಈ ಕಂಪನಿಯ ಜತೆ ದಶಕಗಳಿಂದ ಕೆಲಸ ಮಾಡುತ್ತಿದ್ದ ಖಾಸಗಿ ಕಂಟ್ರಾಕ್ಟರ್‌ಗಳ ಭವಿಷ್ಯವೂ ಡೋಲಾಯಮಾನವಾಗಲಿದೆ.

    ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಸರ್ಕಾರ ಮತ್ತು ಸಂಸ್ಥೆಗಳು ಕಟ್ಟಡ ನಿರ್ಮಾಣದ ಕಾರ‌್ಯವನ್ನು ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವುದು ಮತ್ತು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿರುವುದು ರಿಯಲ್ ಎಸ್ಟೇಟ್ ಕಂಪನಿಗಳ ಈ ದುಸ್ಥಿತಿಗೆ ಕಾರಣ ಎಂದು ಈಕ್ವಿಟಿ ರೀಸರ್ಚ್ ಸಂಸ್ಥೆಯಾದ ಜಾಪ್ ಮೈಜರ್ ತಿಳಿಸಿದೆ.

    ವೀಸಾ ನಿರ್ಬಂಧಕ್ಕೆ ಕೋರ್ಟ್ ತಡೆ; ಸಾವಿರಾರು ಉದ್ಯೋಗಿಗಳು ನಿರಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts