More

    ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !

    ದುಬೈ : ದುಬೈನ ಬುರ್ಜ್ ಖಲೀಫಾದಲ್ಲಿ ಅತ್ಯಂತ ಎತ್ತರದಲ್ಲಿರುವ ರೆಸ್ಟೊರೆಂಟ್​ ಒಂದರಲ್ಲಿ ಇಡೀ ನಗರದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಬ್ರೇಕ್​ಫಾಸ್ಟ್ ಸವಿಯುವುದೆಂದರೆ…? ಆಹಾ! ಇಂಥ ರೋಮಾಂಚಕ ಅನುಭವವನ್ನು ಬಿಗ್​ ಬಾಸ್​ ಖ್ಯಾತಿಯ ನಟಿ ಸನಾ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ತಮ್ಮ ಪತಿ ಅನಸ್ ಸೈಯದ್​ ಅವರೊಂದಿಗೆ ದುಬೈ ಪ್ರವಾಸಕ್ಕೆ ಹೋಗಿದ್ದ ಸನಾ ಖಾನ್, ಜಗತ್ತಿನ ಅತಿ ಉದ್ದದ ಕಟ್ಟಡವಾದ ಬುರ್ಜ್ ಖಲೀಫಾದ 122ನೇ ಮಹಡಿಯಲ್ಲಿರುವ ಅಟಮಾಸ್ಫಿಯರ್ ಎಂಬ ರೆಸ್ಟೊರೆಂಟ್​ನಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಾರೆ. ತಮಗೆ ಸರ್​​ಪ್ರೈಸ್​ ಆಗಿ ಪತಿ ಅಲ್ಲಿಗೆ ಕರೆದುಕೊಂಡು ಹೋದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸನಾ, ವಿಡಿಯೋ ಮತ್ತು ಫೋಟೋಗಳನ್ನು ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Saiyad Sana Khan (@sanakhaan21)

    ಮೊಟ್ಟೆಯಿಂದ ತಯಾರಿಸಿದ ಸನ್ನಿ ಸೈಡ್ ಅಪ್​ ಮತ್ತು ಅರಗುಲಾ ಸೊಪ್ಪಿನ ಸಲಾಡ್ ಜೊತೆಗೆ ಚಿನ್ನದ ಪದರದ ಲೇಪ ಹೊಂದಿದ ಕಾಫಿಯನ್ನು ಸನಾ ದಂಪತಿಗಳು ಸವಿದಿದ್ದಾರೆ. ತಮ್ಮ ಪೋಸ್ಟ್​ಗೆ “ನಿಮ್ಮ ಗಂಡ ಬುರ್ಜ್​ ಖಲೀಫಾದ ಮೇಲೆ ಬ್ರೇಕ್​ಫಾಸ್ಟ್ ಕೊಡಿಸಿ ಚಕಿತಗೊಳಿಸಿದಾಗ… ಓಹ್​! ಆ ಗೋಲ್ಡ್ ಪ್ಲೇಟೆಡ್ ಕಾಫಿ” ಎಂದು ಶೀರ್ಷಿಕೆ ನೀಡಿದ್ದಾರೆ, ಸನಾ. ಕೆಲವೇ ಗಂಟೆಗಳಲ್ಲಿ ಅವರ ಈ ಪೋಸ್ಟ್​ಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ಲೈಕ್​ಗಳು ಲಭಿಸಿವೆ. (ಏಜೆನ್ಸೀಸ್)

    ಆದಾಯ ತೆರಿಗೆ ಇಲಾಖೆಯಿಂದ ಸಿಹಿಸುದ್ದಿ : 2,24,829 ಕೋಟಿ ರೂ. ರೀಫಂಡ್

    VIDEO | ಭಾರತಕ್ಕೆ ಹಾರಿದ ರಫೇಲ್ ಫೈಟರ್ ಜೆಟ್​ಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts