More

    ಪೊಲೀಸ್ ಇಲಾಖೆಗೆ ಸೂಚನೆ ನೀಡಿಲ್ಲ

    ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ಯಾವುದೇ ಸೂಚನೆ ನೀಡಿಲ್ಲ. ಬಿಜೆಪಿಯ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ನಾವು ಯಾವುದೇ ಹಸ್ತಕ್ಷೇಪ ಮಾಡುವವರಲ್ಲ, ಮೋದಿಯವರ ಕಾರ್ಯಕ್ರಮಕ್ಕೆ ತೊಂದರೆ ನೀಡುತ್ತೇವೆಯೇ? ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರೆ ಪೊಲೀಸ್ ಇಲಾಖೆ ಅದಕ್ಕೆ ಹೊಣೆಯಾಗುತ್ತದೆ ಎಂದರು.

    ಶಿರಸಿಯ ಸಭೆಯಲ್ಲಿ ತಾಯಂದಿರ ತಾಳಿ ಕುರಿತ ಮಾತು ಪ್ರಧಾನಿ ಮೋದಿಯವರಿಂದ ಬರಬಾರದಿತ್ತು. ಕಾಂಗ್ರೆಸ್ ಮಹಿಳೆಯರಿಗೆ ಸದಾ ಗೌರವ ಕೊಡುವ ಪಕ್ಷವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ಪ್ರಧಾನಿ ನಮ್ಮೂರಿಗೆ ಬಂದಾಗ ಸಾರ್ವಜನಿಕರ ನಿರೀಕ್ಷೆಗಳೂ ಸಹ ಅಧಿಕವಾಗಿರುತ್ತವೆ. ಆದರೆ, ನರೇಂದ್ರ ಮೋದಿಯವರು ಜಿಲ್ಲೆಗೆ ಯಾವುದೇ ಘೋಷಣೆ ಮಾಡಿಲ್ಲ, ಜಿಲ್ಲೆಯ ಸಮಸ್ಯೆಗಳು ಏನಿವೆ ಎಂಬುದನ್ನು ಅವರಿಗೆ ಕಾರ್ಯಕರ್ತರೂ ತಿಳಿಸಲಿಲ್ಲ. ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಅವರು ಪ್ರಸ್ತಾಪಿಸಿಲ್ಲ. ಅವರ ಶಿರಸಿ ಭೇಟಿಯಿಂದಾಗಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಯೇ ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ ಎಂದರು.

    ರಾಮ ಮಂದಿರ ನಿರ್ಮಾಣ ದೇಶದ ಜನತೆಯ ಕನಸು. 25 ವರ್ಷಗಳ ಹಿಂದೆಯೇ ಜನ ಇಟ್ಟಿಗೆಗಳನ್ನು ಕಳಿಸಿದ್ದರಲ್ಲದೆ ಕೈಲಾದ ಸಹಾಯವನ್ನೂ ನೀಡಿದ್ದರು. ರಾಮ ಮಂದಿರ ವಿಷಯವನ್ನು ಚುನಾವಣೆಯ ಅಸ್ತ್ರವಾಗಿಸಿಕೊಳ್ಳುವುದು ಒಳ್ಳೆಯದಲ್ಲ ಎಂದರು.

    ಮಾಜಿ ಶಾಸಕಿ ರೂಪಾಲಿ ನಾಯ್ಕ ರಾಜ್ಯ ಸರ್ಕಾರದ ಐದು ಯೋಜನೆ ತಿರಸ್ಕರಿಸಿ ಎಂದು ಕರೆಕೊಟ್ಟಿದ್ದಾರೆ. ರಾಜ್ಯದ ಯೋಜನೆಗಳು ಪ್ರತಿ ಮನೆ ಮನೆಗೆ ತಲುಪಿವೆ. ಪ್ರತಿ ಮನೆಯ ನೋವು ರೂಪಾಲಿ ಅರಿತಿದ್ದರೆ ಅವರು ಈ ಮಾತನಾಡುತ್ತಿರಲಿಲ್ಲ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ದೀಪಕ ದೊಡ್ಡೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts