More

  ದುಬೈನಲ್ಲಿ ವಿಂಶತಿ ವೈಭವ ಕಾರ್ಯಕ್ರಮ; ಹನಿಗವಿ ಡುಂಡಿರಾಜರಿಗೆ ಸನ್ಮಾನ

  ದುಬೈ: ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲು ದೇಶ, ಭಾಷೆ, ಸಮುದಾಯದ ಸಂಘಟನೆಗಳ ಮೂಲಕ ಮೂಲ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಸಾರ ಮಾಡುತ್ತಿದ್ದು, ದುಬೈನಲ್ಲಿ ನೆಲೆಸಿರುವ ಬ್ರಾಹ್ಮಣ ಸಮಾಜದ ಬಂಧುಗಳು ಸ್ಥಾಪಿಸಿರುವ ಯುಎಇ ಬ್ರಾಹ್ಮಣ ಸಮಾಜವು 20 ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇತ್ತಿಚೆಗೆ ಅದರ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

  ಯುಎಇ ಬ್ರಾಹ್ಮಣ ಸಮಾಜವು ಸಮುದಾಯದ ಸಂಘಟನೆ, ಸಂಸ್ಕೃತಿಯ ವೃದ್ಧಿಗೆ ಕಳೆದ 20 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ವರ್ಷಪೂರ್ತಿ ‘ವಿಂಶತಿ ವೈಭವ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರ ಸಮಾರೋಪ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಹಾಸ್ಯಸಾಹಿತಿ ಎಚ್.ಡುಂಡಿರಾಜ್ ಅವರಿಗೆ ‘ಶಬ್ದ ಸಾಮ್ರಾಟ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.

  ಕಾರ್ಯಕ್ರಮದಲ್ಲಿ ದುಬೈನ ಉದ್ಯಮಿ ವಾಸುದೇವ ಭಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ನಾಗರಾಜ ರಾವ್, ಫ್ರಾಂಕ್ ಫೆರ್ನಾಂಡೀಸ್, ಮೋಹನ್, ಸುಧಾಕರ ರಾವ್ ಪೇಜಾವರ್ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts