More

    ವೀಸಾ ನಿರ್ಬಂಧಕ್ಕೆ ಕೋರ್ಟ್ ತಡೆ; ಸಾವಿರಾರು ಉದ್ಯೋಗಿಗಳು ನಿರಾಳ

    ವಾಷಿಂಗ್ಟನ್: ಭಾರತ ಸಹಿತ ವಿವಿಧ ದೇಶಗಳ ಐಟಿ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಎಚ್-1ಬಿ ಸಹಿತ ಹಲವು ಉದ್ಯೋಗ ವೀಸಾಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ನಿರ್ಬಂಧಕ್ಕೆ ಕ್ಯಾಲಿಫೋರ್ನಿಯಾ ಉತ್ತರ ಜಿಲ್ಲಾ ನ್ಯಾಯಾಲಯ ಗುರುವಾರ ತಡೆ ನೀಡಿದೆ. ಇದರಿಂದ ಭಾರತದ ಸಾವಿರಾರು ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳು ತುಸು ನಿರಾಳರಾಗಿದ್ದಾರೆ. ಈ ನಿರ್ಬಂಧ ಹೇರುವಲ್ಲಿ ಟ್ರಂಪ್ ಸಾಂವಿಧಾನಿಕ ಅಧಿಕಾರದ ಮಿತಿಯನ್ನು ಮೀರಿದ್ದಾರೆ ಎಂದು ನ್ಯಾಯಾಧೀಶ ಜೆಫ್ರಿ ವೈಟ್ ಟೀಕಿಸಿದ್ದಾರೆ.

    ವಾಣಿಜ್ಯ ಇಲಾಖೆ ಮತ್ತು ಆಂತರಿಕ ಭದ್ರತಾ ಇಲಾಖೆಗಳ ಆದೇಶದ ವಿರುದ್ಧ ಮೊಕದ್ದಮೆ ಹೂಡಿದ್ದ ಸಂಘ ಸಂಸ್ಥೆಗಳ ಸದಸ್ಯರಿಗೆ ಆದೇಶ ಅನ್ವಯವಾಗುತ್ತದೆ ಎಂದು ಜಡ್ಜ್ ಸ್ಪಷ್ಟಪಡಿಸಿದ್ದಾರೆ. ಕರೊನಾ ಹಾವಳಿಯಿಂದಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದ್ದು ಅಮೆರಿಕದವರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಹಲವು ವೀಸಾಗಳ ಮೇಲೆ ನಿರ್ಬಂಧ ಹೇರುವುದಾಗಿ ಟ್ರಂಪ್ ಜೂನ್​ನಲ್ಲಿ ಪ್ರಕಟಿಸಿದ್ದರು. ಸಂಬಂಧಪಟ್ಟ ಇಲಾಖೆಗಳು ಅದನ್ನು ಅನುಷ್ಠಾನಗೊಳಿಸಿದ್ದವು.

    ಇದನ್ನೂ ಓದಿ: ಮುಂಬೈ ವಿರುದ್ಧ ಪಂಜಾಬ್ ತಂಡದ ಸೋಲಿಗೆ ಕಾರಣವಾದ ಆ ಒಂದು ತಪ್ಪು ಯಾವುದು ಗೊತ್ತೇ?

    ಅಮೆರಿಕ ವಾಣಿಜ್ಯ ಮಂಡಳಿ, ರಾಷ್ಟ್ರೀಯ ಉತ್ಪಾದಕರ ಸಂಘ, ರಾಷ್ಟ್ರೀಯ ಚಿಲ್ಲರೆ ವರ್ತಕರ ಸಂಘ, ತಂತ್ರಜ್ಞಾನ ಉದ್ಯಮದ ಗುಂಪಾದ ಟೆಕ್​ನೆಟ್ ಮತ್ತು ಸಾಂಸ್ಕೃತಿಕ ವಿನಿಮಯ ಪ್ರಾಯೋಜಿಸುವ ಇಂಟ್ರಾಕ್ಸ್ ಇನ್​ಕಾರ್ಪೆರೇಷನ್ ವೀಸಾ ನಿರ್ಬಂಧ ಪ್ರಶ್ನಿಸಿ ಮೊಕದ್ದಮೆ ಹೂಡಿದ್ದವು. ಟ್ರಂಪ್ ಕ್ರಮದಿಂದ ದೇಶದ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬೀಳುತ್ತವೆ. ಕೆಲವು ಮಹತ್ವದ ಕ್ಷೇತ್ರಗಳಲ್ಲಿ ನೇಮಕಾತಿ ಮಾಡಲಾಗದೆ ಸಂಕಟ ಪಡಬೇಕಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಅಮೆರಿಕದ ಮತ್ತು ಭಾರತೀಯ ಪ್ರಮುಖ ಐಟಿ ಕಂಪನಿಗಳು ಎಚ್-1ಬಿ ವೀಸಾವನ್ನು ವ್ಯಾಪಕವಾಗಿ ಬಳಸುತ್ತವೆ. ಕೃಷಿಯೇತರ ಸೀಸನಲ್ ಕಾರ್ವಿುಕರಿಗಾಗಿ ಎಚ್-2ಬಿ, ಸಾಂಸ್ಕೃತಿಕ ವಿನಿಮಯಕ್ಕೆ ಜೆ ವೀಸಾ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಮ್ಯಾನೇಜರ್ ಮುಂತಾದ ಪ್ರಮುಖ ಹುದ್ದೆಗಳ ಉದ್ಯೋಗಿಗಳಿಗೆ ಎಲ್ ವೀಸಾ ನೀಡಲಾಗುತ್ತದೆ. ಇವೆಲ್ಲವುಗಳ ಮೇಲೆ ವರ್ಷಾಂತ್ಯದ ವರೆಗೆ ನಿರ್ಬಂಧ ವಿಧಿಸಲಾಗಿತ್ತು.

    ಇದು ಭಾರತದ 1328ನೇ ಚಿಟ್ಟೆ ಪ್ರಭೇದ, ಸಿಕ್ಕಿದ್ದೆಲ್ಲಿ ಗೊತ್ತೇ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts