More

    ಸೋಂಕಿದ್ದರೂ ಲಕ್ಷಣಗಳಿಲ್ಲ; ಕರೊನಾ ವೈರಸ್​ನಲ್ಲಿದ್ಯಂತೆ ನೋವು ನಿವಾರಕ!

    ನ್ಯೂಯಾರ್ಕ್​​: ‘ನಾನು ಕರೊನ ಪರೀಕ್ಷೆ ಮಾಡಿಸಿಕೊಂಡಿದ್ದು, ಕೋವಿಡ್​ ಪಾಸಿಟಿವ್ ಎಂಬುದು ದೃಢಪಟ್ಟಿದೆ. ಆದರೆ ಯಾವುದೇ ರೋಗಲಕ್ಷಣಗಳಿಲ್ಲ. ಆದಾಗ್ಯೂ ಮುಂಜಾಗ್ರತೆ ದೃಷ್ಟಿಯಿಂದ ಹೋಂ ಕ್ವಾರಂಟೈನ್​ಗೆ ಒಳಗಾಗುತ್ತಿದ್ದೇನೆ..’
    – ಕರೊನಾ ಸೋಂಕಿತರಾದ ಹಲವರು ಇತ್ತೀಚೆಗೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿರುವುದು ಸಾಮಾನ್ಯ. ಯಾಕೆ ಸೋಂಕಿದ್ದರೂ ಲಕ್ಷಣಗಳಿಲ್ಲ ಎಂಬ ಈ ಅಂಶದ ಬಗ್ಗೆ ಈಗ ಅಧ್ಯಯನವೊಂದು ಬೆಳಕು ಚೆಲ್ಲಿದೆ.

    ಕರೊನಾ ವೈರಸ್​ನಲ್ಲಿ ನೋವು ನಿವಾರಕ ಗುಣವಿದೆ. ಆರಂಭಿಕ ಹಂತದಲ್ಲಿ ಸೋಂಕಿತರಲ್ಲಿ ಅನೇಕರು ಆರಾಮವಾಗಿ ಓಡಾಡಿಕೊಂಡಿರುತ್ತಾರೆ. ಏಕೆಂದರೆ ಅವರಲ್ಲಿ ಸೋಂಕಿದ್ದರೂ ಯಾವ ನೋವೂ ಇರುವುದಿಲ್ಲ. ಇದೇ ಕಾರಣಕ್ಕೆ ಕರೊನಾ ಸೋಂಕು ಹೆಚ್ಚಾಗುತ್ತಿರುವುದು ಎಂಬುದಾಗಿ ಅಮೆರಿಕದ ಅರಿಜೋನಾ ಯುನಿವರ್ಸಿಟಿಯ ರಾಜೇಶ್​ ಖನ್ನಾ ತಿಳಿಸಿದ್ದಾರೆ.

    ವೈರಸ್​ನಿಂದಾಗಿ ಸೋಂಕು ಉಂಟಾದರೂ ವೈರಸ್​ನ ಸ್ಪೈಕ್​ನಲ್ಲಿರುವ ಪ್ರೊಟೀನ್​ ಆ ನೋವನ್ನು ಅದುಮಿಡುತ್ತದೆ. ಹೀಗಾಗಿ ಸೋಂಕಿತರಿಗೆ ತಾವು ಚೆನ್ನಾಗಿದ್ದೇವೆ ಎನ್ನುವ ಫೀಲ್​ ಇರುತ್ತದೆ. ಹಾಗಂತ ಅವರು ಎಲ್ಲೆಂದರಲ್ಲಿ ಓಡಾಡುವುದರಿಂದ ಸೋಂಕು ಹೆಚ್ಚಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಅಂದಹಾಗೆ ಇಂಥದ್ದೊಂದು ಅಧ್ಯಯನ ಪ್ರಕಟವಾಗಿರುವ ಜರ್ನಲ್ ಹೆಸರು ‘ಪೇನ್​’. (ಏಜೆನ್ಸೀಸ್​)

    ಇದನ್ನು ಓದಿ: ಜನವರಿಯಲ್ಲಿ ಸಿಗಲಿದೆ ಕರೊನಾ ಲಸಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts