

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಡಿಸೆಂಬರ್ 27) ಹರಿಯಾಣ ಜಜ್ಜರ್ನಲ್ಲಿರುವ ವೀರೇಂದ್ರ ಆರ್ಯ ಅಖಾಡದಲ್ಲಿ ಖ್ಯಾತ ಕುಸ್ತಿಪಟುಗಳಾದ ಬಜರಂಜ್ ಪೂನಿಯಾ ಸೇರಿದಂತೆ ಹಲವರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ.
ಭಾರತದ ಕುಸ್ತಿ ಫೆಡರೇಶನ್ (WFI)ನ ವಿವಾದದ ನಡುವೆಯೇ ರಾಹುಲ್ ಕುಸ್ತಿಪಟುಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಬಜರಂಗ್ ಪೂನಿಯಾ ಜೊತೆ ಅಖಾಡದಲ್ಲಿ ಸೆಣಸಾಡುತ್ತಿದ್ದ ದೃಶ್ಯ ಕಂಡುಬಂತು. ಆದರೆ, ಈ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ವೀರೇಂದ್ರ ಆರ್ಯ ಆಖಾಡದಲ್ಲಿ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ ಬಳಿಕ ಅಲ್ಲಿನ ಅಡುಗೆ ಮನೆಗೆ ಭೇಟಿ ನೀಡಿದ ರಾಹುಲ್ ಅಲ್ಲಿನ ವಿಶೇಷ ಆಹಾರವನ್ನು ಸೇವಿಸಿ ಆನಂದಿಸಿದ್ದಾರೆ. ಆದರೆ, ಅಡುಗೆ ಮನೆಗೆ ಶೂ ಹಾಕಿ ಪ್ರವೇಶಿಸಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ರಾಹುಲ್ ಗಾಂಧಿ ಶೂ ಧರಿಸಿ ಅಡುಗೆ ಮನೆ ಪ್ರವೇಶಿಸುವ ಮೂಲಕ ಜಾಟ್ ಸಮುದಾಯವನ್ನು ಅವಮಾನಿಸಿದ್ದಾರೆ. ಮೊದಲಿಗೆ ಜಾಟ್ ಸಮುದಾಯಕ್ಕೆ ಸೇರಿದ ಉಪರಾಷ್ಟ್ರಪತಿ ಧನಕರ್ ಅವರನ್ನು ಅವಮಾನಿಸಿದ ಇವರು ಶೂ ಧರಿಸಿ ಅಡುಗೆ ಮನೆ ಪ್ರವೇಶಿಸುವ ಮೂಲಕ ಮತ್ತೊಮ್ಮೆ ಅಗೌರವ ತೋರಿದ್ದಾರೆ. ಯಾವ ಹಿಂದೂ ಅಡುಗೆ ಮನೆಯಲ್ಲಿ ಶೂ ಧರಿಸಿ ಊಟ ಮಾಡುತ್ತಾರೆ. ಇದು ದೇವಿ ಅನ್ನಪೂರ್ಣೇಶ್ವರಿಗೆ ಮಾಡಿದ ಅಪಮಾನವಲ್ಲವೇ. ಭಾರತ್ ತೋಡೋಒ ಯಾತ್ರೆಯಲ್ಲಿ ವಿವಾದಿತ ಪಾದ್ರಿ ಜಾರ್ಜ್ ಪೊನ್ನಯ್ಯನ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.