ಕೂಡಲಸಂಗಮದಲ್ಲಿ ಅನ್ನ ದಾಸೋಹಕ್ಕೆ 5000 ರೂ. ದೇಣಿಗೆ ನೀಡಿದ ರಾಹುಲ್ ಗಾಂಧಿ

Rahul Gandhi
Published on

ಬಾಗಲಕೋಟೆ: ಬಸವ ಸಮಿತಿ ವತಿಯಿಂದ ಕೂಡಲಸಂಗಮದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಾಸೋಹ ಭವನದಲ್ಲಿ ಪ್ರಸಾದ ಭೋಜನ ಸೇವಿಸಿದ್ದಾರೆ. ಬಳಿಕ ಕೂಡಲಸಂಗಮದ ನಿತ್ಯ ಉಚಿತ ದಾಸೋಹ ಭವನಕ್ಕೆ ರಾಹುಲ್ ಗಾಂಧಿ 5000 ರೂಪಾಯಿ ದೇಣಿಗೆ ನೀಡಿದ್ದಾರೆ.

ರಾಹುಲ್​ಗೆ ಸಿದ್ದರಾಮಯ್ಯ ಸಾಥ್

ರಾಹುಲ್ ಗಾಂಧಿ ಅನ್ನ ದಾಸೋಹ ಭವನದಲ್ಲಿ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ರುಚಿ ನೋಡಿದ್ದಾರೆ. ಚಪಾತಿ, ಅನ್ನ-ಸಾರು, ಹೋಳಿಗೆ, ಹಪ್ಪಳ, ಬದನೆಕಾಯಿ ಪಲ್ಯ‌ ಸೇರಿಸಿ ಊಟ ಮಾಡಿದ್ದಾರೆ. ರಾಹುಲ್​ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಕೆ.ಸಿ.ವೇಣುಗೋಪಾಲ್ ಸಾಥ್ ನೀಡಿದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ಬಸವಣ್ಣನವರ ಜಯಂತಿ ದಿನದಂದು ಕೂಡಲಸಂಗಮಕ್ಕೆ ಆಗಮಿಸಿರುವುದು ಬಹಳ ಖುಷಿಯಾಗಿದೆ. ಇಂದು ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಕಾರ್ಯರೂಪಕ್ಕೆ ಬರಲು ಬಸವಣ್ಣನವರ ಅನುಭವ ಮಂಟಪ ಕಾರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net