ನೆರೆರಾಷ್ಟ್ರಗಳ ಜತೆಗೆ ಕಾಂಗ್ರೆಸ್ ಬೆಳೆಸಿದ ಸಖ್ಯವನ್ನು ಹಾಳು ಮಾಡ್ತಿದ್ದಾರೆ ಪ್ರಧಾನಿ ಮೋದಿ: ರಾಹುಲ್ ಗಾಂಧಿ ಚಿಂತೆ

Rahul Gandhi
Published on

ನವದೆಹಲಿ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೆರೆರಾಷ್ಟ್ರಗಳ ಜತೆಗೆ ಬೆಳೆಸಿಕೊಂಡಿದ್ದ ಸಂಬಂಧವನ್ನು ಪ್ರಧಾನಿ ನರೇಂದ್ರ ಮೋದಿ ಹಾಳುಗೆಡವುತ್ತಿದ್ದಾರೆ. ಅನೇಕ ದಶಕಗಳ ಪ್ರಯತ್ನದ ಫಲವಾಗಿ ರೂಪುಗೊಂಡ ಸಂಬಂಧವಾಗಿತ್ತು ಅದು. ಬಹಳ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದ ಎಕನಾಮಿಸ್ಟ್ ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಯ ಇಮೇಜ್ ಅನ್ನು ಟ್ಯಾಗ್ ಮಾಡಿದ ರಾಹುಲ್ ಗಾಂಧಿ, ನೆರೆಹೊರೆಯಲ್ಲಿ ಸ್ನೇಹಿತರಿಲ್ಲದೇ ಬದುಕುಸಾಗಿಸುವುದು ಅಪಾಯಕಾರಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಜತೆಗಿನ ಸಂಬಂಧವನ್ನು ಬಾಂಗ್ಲಾದೇಶ ಕಡಿಮೆ ಮಾಡಿದ್ದು, ಚೀನಾದೊಂದಿಗಿನ ಸಂಬಂಧ ದೃಢವಾಗುತ್ತಿದೆ ಎಂಬ ದ ಎಕನಾಮಿಸ್ಟ್ ವರದಿಯ ಶೀರ್ಷಿಕೆ ಅದರಲ್ಲಿದೆ.

ಬಾಂಗ್ಲಾದೇಶ ಒಂದುಕಾಲದಲ್ಲಿ ಭಾರತದ ಆಪ್ತ ರಾಷ್ಟ್ರವಾಗಿತ್ತು. ಆದರೆ ಈಗ ಈ ಸ್ನೇಹ ಸಂಬಂಧ ಸಡಿಲಗೊಳ್ಳುತ್ತ ಸಾಗಿದ್ದು, ಚೀನಾದ ಜತೆಗಿನ ಸಂಬಂಧ ಗಟ್ಟಿಯಾಗುತ್ತಿದೆ ಎಂಬರ್ಥದ ಲೇಖನ ಎಕನಾಮಿಸ್ಟ್ ಪ್ರಕಟಿಸಿದೆ. ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನ ಸಂದರ್ಭ ನೆನಪಿಸಿಕೊಂಡು ಮೇಲಿನಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net