ವೃದ್ಧನ ಪರಿಸ್ಥಿತಿಗೆ ಮರುಗಿದ ನಟ ರಾಘವ ಲಾರೆನ್ಸ್​; ವ್ಯಕ್ತಿಯ ಸುಳಿವು ಸಿಕ್ಕರೆ ಹೇಳಿ, 1 ಲಕ್ಷ ರೂ. ಕೊಡಬೇಕು! | Raghava Lawrence

ವಿಜಯವಾಣಿ (63)
Published on

Raghava Lawrence: ತಮಿಳು ನಟ ರಾಘವ​ ಲಾರೆನ್ಸ್ ಕೇವಲ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕ ಅಪಾರ ಮನಗಳನ್ನು ಗೆದ್ದಿದ್ದಾರೆ. ಸದಾ ಒಂದಲ್ಲ ಒಂದು ರೀತಿಯಲ್ಲಿ ಸಹಾಯಹಸ್ತ ಚಾಚುವ ರಾಘವ​​, ಈ ಬಾರಿ ವಯಸ್ಸಾದ ದಂಪತಿಗೆ ಬರೋಬ್ಬರಿ 1 ಲಕ್ಷ ರೂ. ಹಣವನ್ನು ನೀಡಿದ್ದಾರೆ.

ಯಾರಾದರೂ ಕಷ್ಟದಲ್ಲಿದ್ದಾರೆ ಎಂದು ತಿಳಿದರೆ, ಆ ಮರುಕ್ಷಣವೇ ಅವರಿಗಾಗಿ ಮಿಡಿಯುವ ರಾಘವ​, ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಸೇವಾ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದಾರೆ. ಇದು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ತಿಳಿದಿದೆ. ಈಗಾಗಲೇ ನಿರಾಶ್ರಿತರು, ಅಂಗವಿಕಲರು, ಬಡ ವಿದ್ಯಾರ್ಥಿಗಳು ಮತ್ತು ರೈತರಿಗೆ ಆರ್ಥಿಕ ನೆರವು ನೀಡಿರುವ ಅವರು, ಇತ್ತೀಚೆಗಷ್ಟೇ ಶ್ವೇತಾ ಎಂಬ ವಿಶೇಷ ಚೇತನ ಮಹಿಳೆಯ ಕುಟುಂಬಕ್ಕೆ ಸ್ಕೂಟರ್​ ಅನ್ನು ಉಡುಗೊರೆಯಾಗಿ ನೀಡಿದ್ದರು. ಈಗ ಚೆನ್ನೈ ಮೂಲಕ ವೃದ್ಧ ದಂಪತಿಗೆ ಧನ ಸಹಾಯ ಮಾಡಿದ್ದಾರೆ.

80 ವರ್ಷದ ವ್ಯಕ್ತಿಯೊಬ್ಬರು ಚೆನ್ನೈ ಸ್ಥಳೀಯ ರೈಲುಗಳಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ಸ್ಪಂದಿಸಿದ ರಾಘವ​​ ಲಾರೆನ್ಸ್​, "ವೃದ್ಧನ ವಿವರಗಳು ಯಾರಿಗಾದರೂ ತಿಳಿದಿದ್ದರೆ, ದಯಮಾಡಿ ನನಗೆ ತಿಳಿಸಿ. ಅವರಿಗೆ 1 ಲಕ್ಷ ರೂ. ಹಣ ಕೊಡಬೇಕು. ಎಲ್ಲಾದರೂ ಕಂಡರೆ ನಿಮ್ಮಿಂದ ಆದಷ್ಟು ಸಹಾಯ ಮಾಡಿ" ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net