ಡಾ. ವಿಷ್ಣುವರ್ಧನ್​, ಸರೋಜಾದೇವಿ... 12 ಗಣ್ಯರಿಗೆ ಒಲಿದ 'ಕರ್ನಾಟಕ ರತ್ನ' ಪ್ರಶಸ್ತಿ; ಇಲ್ಲಿದೆ ಪೂರ್ಣ ಪಟ್ಟಿ | Karnataka Ratna

ವಿಜಯವಾಣಿ (62)
Published on

Karnataka Ratna: ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ 'ಕರ್ನಾಟಕ ರತ್ನ' ಇದೀಗ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೆ ಒಲಿದಿದೆ. 'ಸಾಹಸಸಿಂಹ' ಡಾ. ವಿಷ್ಣುವರ್ಧನ್​ ಮತ್ತು ಹಿರಿಯ ನಟಿ ಬಿ. ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​.ಕೆ. ಪಾಟೀಲ್​, ಈ ವಿಚಾರವನ್ನು ಮುನ್ನೆಲೆಗೆ ತಂದರು. 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಇಡೀ ರಾಜ್ಯದ ಮನೆ ಮನ ತಲುಪಿರುವಂತಹ ದಿಗ್ಗಜ ನಟ ವಿಷ್ಣುವರ್ಧನ್​​ಗೆ, ಕರ್ನಾಟಕದ ಶ್ರೇಷ್ಠ ಪುರಸ್ಕಾರ ನೀಡಬೇಕು ಎನ್ನುವುದು ಅವರ ಕುಟುಂಬ ವರ್ಗ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು, ಅಭಿಮಾನಿಗಳ ಬಯಕೆಯಾಗಿತ್ತು, ಅಂತೆಯೇ, ರಾಜ್ಯ ಸರ್ಕಾರ ಎಲ್ಲರ ಮನವಿಗೆ ಸ್ಪಂದಿಸಿ ಪ್ರಶಸ್ತಿ ಘೋಷಿಸಿದೆ ಎಂದರು.

ಇನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ ಒಟ್ಟು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಬಹುಭಾಷಾ ನಟಿಯಾಗಿ ಮೆರೆದ ಬಿ. ಸರೋಜಾದೇವಿ ಅವರಿಗೂ ಸರ್ಕಾರ, ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದೆ. ಇಲ್ಲಿಯವರೆಗೆ, 10 ಮಂದಿ ಈ ಅತ್ಯುನ್ನತ ಪ್ರಸ್ತಿಗೆ ಭಾಜನರಾಗಿದ್ದಾರೆ. 2022ರಲ್ಲಿ ಪವರ್​ಸ್ಟಾರ್​, ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ನೀಡಲಾಯಿತು. ಹಾಗಿದ್ದರೆ, ಯಾರೆಲ್ಲ ಗಣ್ಯರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಕರ್ನಾಟಕ ರತ್ನ ಪ್ರಶಸ್ತಿ ಪಡೆದ 12 ಗಣ್ಯರಿವರು

1. ಕುವೆಂಪು (1992)

ಕ್ಷೇತ್ರ: ಸಾಹಿತ್ಯ

2. ಡಾ. ರಾಜ್‌ಕುಮಾರ್‌ (1992)

ಕ್ಷೇತ್ರ: ಸಿನಿಮಾ

3. ಎಸ್‌. ನಿಜಲಿಂಗಪ್ಪ (1999)

ಕ್ಷೇತ್ರ: ರಾಜಕೀಯ

4. ಸಿ.ಎನ್‌.ಆರ್. ರಾವ್ (2000)

ಕ್ಷೇತ್ರ: ವಿಜ್ಞಾನ

5. ದೇವಿಪ್ರಸಾದ್ ಶೆಟ್ಟಿ (2001)

ಕ್ಷೇತ್ರ: ವೈದ್ಯಕೀಯ

6. ಭೀಮಸೇನ ಜೋಷಿ (2005)

ಕ್ಷೇತ್ರ: ಸಂಗೀತ

7. ಶ್ರೀ ಶಿವಕುಮಾರ ಸ್ವಾಮೀಜಿ (2007)

ಕ್ಷೇತ್ರ: ಸಮಾಜ ಸೇವೆ

8. ದೇ. ಜವರೇಗೌಡ (2008)

ಕ್ಷೇತ್ರ: ಸಾಹಿತ್ಯ

9. ಡಿ. ವೀರೇಂದ್ರ ಹೆಗ್ಗಡೆ (2009)

ಕ್ಷೇತ್ರ: ಸಾಮಾಜಿಕ ಸೇವೆ

10. ಡಾ. ಪುನೀತ್ ರಾಜ್‌ಕುಮಾರ್ (2022)

ಕ್ಷೇತ್ರ: ಸಿನಿಮಾ-ಸಮಾಜ ಸೇವೆ

11. ಡಾ. ವಿಷ್ಣುವರ್ಧನ್​ (2025)

ಕ್ಷೇತ್ರ: ಸಿನಿಮಾ

12. ಬಿ. ಸರೋಜಾದೇವಿ (2025)

ಕ್ಷೇತ್ರ: ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net