ವಿಟ್ಲ ಗ್ರಾಮೀಣ ಸಹಕಾರಿಗೆ ೩.೪೫ ಕೋಟಿ ರೂ. ಲಾಭ -  ವಾರ್ಷಿಕ ಮಹಾಸಭೆಯಲ್ಲಿ ಎಚ್.ಜಗನ್ನಾಥ ಸಾಲ್ಯಾನ್ ಘೋಷಣೆ - ಸದಸ್ಯರಿಗೆ ಶೇ.೨೨ ಲಾಭಾಂಶ

PTR_11 SEP_2
Published on

ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ೨೦೨೪-೨೫ನೇ ಸಾಲಿನಲ್ಲಿ ದಾಖಲೆಯ ೮೬೪.೨೬ ಕೋಟಿ ರೂ. ವ್ಯವಹಾರ ನಡೆಸಿ ೩.೪೫ ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.೨೨ ಲಾಭಾಂಶ ಹಂಚಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್ ಹೇಳಿದರು.

ಬ್ಯಾಂಕ್‌ನ ೭೦ನೇ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ ೮೫೧೫ ಸದಸ್ಯರನ್ನು ಹೊಂದಿ, ೨.೮೨ ಕೋಟಿ ರೂ.ಗಳ ಪಾಲು ಬಂಡವಾಳ ಹೊಂದಿದೆ. ೧೩೪.೭೩ ಕೋಟಿ ರೂ. ಠೇವಣಿ ಹೊಂದಿದೆ. ಮೂರು ತಿಂಗಳಲ್ಲಿ ಉಪ್ಪಿನಂಗಡಿ ಶಾಖೆ ಕಾರ್ಯಾರಂಭವಾಗಲಿದ್ದು, ಉಜಿರೆಯಲ್ಲಿ ಶಾಖೆ ಮಾಡುವುದಕ್ಕೆ ಸ್ಥಳದ ಹುಡುಕಾಟ ನಡೆಯುತ್ತಿದೆ. ವಿಟ್ಲದಲ್ಲಿ ಪ್ರಧಾನ ಕಚೇರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಯೋಜನೆ ಹಾಕಲಾಗಿದೆ ಎಂದರು.

ಸಂಘದ ಹಿರಿಯ ಸದಸ್ಯರಾದ ನಾರಾಯಣ ಭಟ್ ಎಂ., ಸುಂದರಿ, ಮಜಿ ರಾಮ ಭಟ್, ವೆಂಕಟರಮಣ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಳೆದ ಸಾಲಿನಲ್ಲಿ ಮೃತರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಿರ್ದೇಶಕರಾದ ಜಯಂತಿ ಎಚ್. ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ., ಪೂವಪ್ಪ ಎಸ್., ದಿವಾಕರ್ ವಿ., ಕೇಶವ ಎ., ಗೋವರ್ಧನ ಕುಮಾರ್ ಐ., ಭಾಸ್ಕರ ಶೆಟ್ಟಿ, ರಾಮದಾಸ ಶೆಣೈ ವಿ., ಮೋಹನ್ ಕೆ.ಎಸ್., ವಿಶ್ವನಾಥ ಎಂ., ತಿರುಮಲೇಶ್ವರ ಭಟ್ ಪಿ., ಸತೀಶ್ ಪಿ., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ, ರಾಣ್ಯ ಡಿ., ಲೆಕ್ಕಾಧಿಕಾರಿ ಕುಶಾಲಪ್ಪ ಟಿ. ಮತ್ತಿತರರು ಉಪಸ್ಥಿತರಿದ್ದರು.

ಕಲ್ಲಡ್ಕ ಶಾಖಾಧಿಕಾರಿ ಶ್ರೀನಿಧಿ ವಿ. ಕುಡ್ವ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ. ವರದಿ ವಾಚಿಸಿದರು. ಉಪಾಧ್ಯಕ್ಷ ಮನೋರಂಜನ್ ಕೆ.ಆರ್. ವಂದಿಸಿದರು. ಮಹೇಶ್ ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net