ಪಾಕಿಸ್ತಾನ ಪರಮಾಣು ಸೌಲಭ್ಯದಲ್ಲಿ ವಿಕಿರಣ ಸೋರಿಕೆ!: ಪರಮಾಣು ಶಕ್ತಿ ಸಂಸ್ಥೆ ಹೇಳಿದ್ದೇನು? | IAEA

dk - 2025-05-15T163516.862
Published on

IAEA: ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ 'ಆಪರೇಷನ್​ ಸಿಂಧೂರ' ಕಾರ್ಯಚರಣೆಯಲ್ಲಿ ಪಾಕಿಸ್ತಾನದ ಕಿರಾನಾ ಹಿಲ್ಸ್ ಪ್ರದೇಶವು ಪರಮಾಣು ಸೌಲಭ್ಯ ಹೊಂದಿದೆ ಎಂಬ ವರದಿಗಳ ಬಗ್ಗೆ ಭಾರತ ನಿರಾಕರಿಸಿದ ಕೆಲ ದಿನಗಳ ನಂತರ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ( IAEA) ಪಾಕಿಸ್ತಾನದಲ್ಲಿನ ಪರಮಾಣು ಸೌಲಭ್ಯದಿಂದ ಯಾವುದೇ ವಿಕಿರಣ ಸೌಲಭ್ಯ ಸೋರಿಕೆಯಾಗಿಲ್ಲ ಎಂದು ದೃಢಪಡಿಸಿದೆ ಎಂದು ದಿ ಇಂಡಿಯನ್​ ಎಕ್ಸ್​ಪ್ರೆಸ್​​ ವರದಿ ಮಾಡಿದೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ IAEA ಅಧಿಕಾರಿಗಳು,'' ನೀವು ಉಲ್ಲೇಖಿಸುತ್ತಿರುವ ವರದಿಗಳ ಬಗ್ಗೆ ತಿಳಿದಿದೆ. IAEA ಲಭ್ಯವಿರುವ ಮಾಹಿತಿ ಪಾಕಿಸ್ತಾನ ಪರಮಾಣು ಸೌಲಭ್ಯದಿಂದ ವಿಕಿರಣ ಸೋರಿಕೆಯಾಗಿಲ್ಲ'' ಎಂದು ಹೇಳಿದೆ.

ಪಾಕಿಸ್ತಾನದ ಕೆಲವು ಸುರಕ್ಷಿತ ತಾಣಗಳಲ್ಲಿ ಪರಮಾಣು ವಿಕಿರಣ ಸೋರಿಕೆಯಾಗಿದೆ ಎಂಬ ವರದಿಗಳ ನಂತರ US ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸುತ್ತದೆಯೇ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿದಾಗ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.

IAF ಹೇಳಿದ್ದೇನು..?

ಇದೇ ಮೇ.12ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಏರ್​ ಮಾರ್ಷಲ್​ ಎ.ಕೆ.ಭಾರ್ತಿ, ಭಾರತೀಯ ಶಸ್ತ್ರಪಡೆಗಳು ಪಕಿಸ್ತಾನದ ಪರಮಾಣು ಸೌಲಭ್ಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದ್ದರು.

ಪತ್ರಿಕಾಗೋಷ್ಠಿಯ ಸಮಯದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾರ್ತಿ, "ಕಿರಾನಾ ಬೆಟ್ಟದಲ್ಲಿ ಪರಮಾಣು ಸ್ಥಾವರವಿದೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು. ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net