ಭಾರತದಿಂದ ನಾಶವಾದ ಲಷ್ಕರ್​​ ಕಟ್ಟಡ ಪುನರ್ನಿರ್ಮಿಸುವುದಾಗಿ ಪಾಕ್ ಪ್ರತಿಜ್ಞೆ | Islamabad

Islamabad

Islamabad: ಪಹಲ್ಗಾಮ್​ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ ನಡೆಸಿ ಒಂಬತ್ತು ಭಯೋತ್ಪಾದಕ ನೆಲೆಯನ್ನು ಧ್ವಂಸಗೊಳಿಸಿತು. ಆ ದಾಳಿಯಲ್ಲಿ 100ಕ್ಕೂ ಹೆಚ್ಚಿನ ಉಗ್ರರು ಹತ್ಯೆಯಾಗಿದ್ದಾರೆ. ಪಾಕಿಸ್ತಾನದ ಫೆಡರಲ್ ಸಚಿವ ರಾಣಾ ತನ್ನೀ‌ರ್ ಹುಸೈನ್ ಬುಧವಾರ (ಮೇ.14) ಮುರಿಡೈ ಸ್ಥಳಕ್ಕೆ ಭೇಟಿ ನೀಡಿ, ಪಾಕ್ ಸರ್ಕಾರ ತನ್ನ ಸ್ವಂತ ಖರ್ಚಿನಲ್ಲಿ ಈ ಪ್ರದೇಶವನ್ನು ಪುನರ್ ನಿರ್ಮಿಸಲು ಪ್ರತಿಜ್ಞೆ ಮಾಡಿದೆ.

blank

ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ; ಮಧ್ಯಂತರ ಪರಿಹಾರ ಅರ್ಜಿ ವಿಚಾರಣೆ ಮೇ 20 ಕ್ಕೆ ಮುಂದೂಡಿಕೆ| Waqf act

“ಭಾರತದ ಹೆಮ್ಮೆಯ ತಂತ್ರಜ್ಞಾನವನ್ನು ಶೀಘ್ರದಲ್ಲೇ ಲಾಹೋರ್‌ನ ಬಿಲಾಲ್ ಗಂಜ್‌ನಲ್ಲಿ ಮಾರಾಟ ಮಾಡುವುದನ್ನು ನೋಡಲಾಗುವುದು” ಎಂದು ಹೇಳುವ ಮೂಲಕ ಅವರು ಭಾರತದ ತಂತ್ರಜ್ಞಾನವನ್ನು ಅಣಕಿಸಿದರು. ಜೊತೆಗೆ “ಕಾರ್ಯಾಚರಣೆಯಲ್ಲಿ ಹಾನಿಗೊಳಗಾದ ಮಸೀದಿಯ ಪುನರ್ನಿರ್ಮಾಣಕ್ಕೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ವೈಯಕ್ತಿಕವಾಗಿ ಹಣಕಾಸು ಒದಗಿಸಲಿದ್ದಾರೆ” ಎಂದು ಫೆಡರಲ್ ಸಚಿವರು ಹೇಳಿದರು ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ಮಸೀದಿಯನ್ನು ಪುನರ್ನಿರ್ಮಿಸುವ ಸರ್ಕಾರದ ನಿರ್ಧಾರವನ್ನು ಹೇಳಿದ ಅವರು, ಪಾಕ್ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಮಸೀದಿಯನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದ್ದಾರೆ.

ಮೇ 7 ರಂದು ಭಾರತವು ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತು. ಕಾರ್ಯಾಚರಣೆಯ ಸಮಯದಲ್ಲಿ ಗುರಿಯಾಗಿಸಿಕೊಂಡ ಸ್ಥಳಗಳಲ್ಲಿ ಮುರಿಡ್ಕೆ ಕೂಡ ಒಂದು. ದಾಳಿಯ ಪ್ರಮುಖ ಗುರಿಗಳು ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೊಯ್ಬಾದ ಜಿಹಾದಿ ರಚನೆಗಳಾಗಿದ್ದವು, ಕಳೆದ ಮೂರು ದಶಕಗಳಲ್ಲಿ ಭಾರತದ ನೆಲದಲ್ಲಿ ಪ್ರಮುಖ ದಾಳಿಗಳಿಗೆ ಕಾರಣವಾದ ಎರಡು ಭಯೋತ್ಪಾದಕ ಸಂಘಟನೆಗಳು. (ಏಜೆನ್ಸೀಸ್​)

ಪುಲ್ವಾಮಾದಲ್ಲಿ ಗುಂಡಿನ ಚಕಮಕಿ; ಮೂವರು ಭಯೋತ್ಪಾದಕರು ಬಲಿ| Terrorists encounter

Share This Article
blank

ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು…egg

egg: ಮನುಷ್ಯನ ಆರೋಗ್ಯಕ್ಕೆ ಮೊಟ್ಟೆ ಬಹಳ ಒಳ್ಳೆಯದು. ಹೀಗಾಗಿ ದಿನಾ ಬೆಳಗ್ಗೆ ಬೇಯಿಸಿದ ಮೊಟ್ಟೆ ತಿನ್ನುವ…

ಬೆಳಿಗ್ಗೆ ಎದ್ದು ಮೊಬೈಲ್ ನೋಡುವ ಬದಲು ಈ ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹದಿಂದಿರಬಹುದು! Morning

Morning: ಬೆಳಿಗ್ಗೆ ಚೆನ್ನಾಗಿ ಪ್ರಾರಂಭವಾದರೆ, ಇಡೀ ದಿನ ಚೆನ್ನಾಗಿ ನಡೆಯುತ್ತದೆ. ದೇಹವನ್ನು ಆರೋಗ್ಯಕರವಾಗಿ, ಫಿಟ್ ಆಗಿ…

blank