

ಚೆನ್ನೈ: ನಟಿ ರಾಧಿಕಾ ಶರತ್ಕುಮಾರ್ ಅವರು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆಗೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಮತ್ತು ಕ್ರೀಡೆಯಲ್ಲಿ ಅವರ ಸಮರ್ಪಣೆಯನ್ನು ನಟಿ ಶ್ಲಾಘಿಸಿದರು. ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಟಿ ರಾಧಿಕಾ ಶರತ್ಕುಮಾರ್ ಮಾಡಿರುವ ಪೋಸ್ಟ್ನಲ್ಲಿ ಲಂಡನ್ನಿಂದ ಚೆನ್ನೈಗೆ ಹಿಂದಿರುಗುವಾಗ ಲಕ್ಷಾಂತರ ಜನರ ಪ್ರೀತಿ ಪಡೆದಿರುವ ಐಕಾನ್ ವಿರಾಟ್ ಕೊಯ್ಲಿ ಅವರನ್ನು ಭೇಟಿ ಆಗಿದ್ದು ಸಂತೋಷವಾಗಿದೆ. ಅವರು ಕ್ರಿಕೆಟ್ ಆಡಲು ಇಲ್ಲಿಗೆ ಬಂದಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ ಸೆಲ್ಫಿಗಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.
ರಾಧಿಕಾ ಶರತ್ಕುಮಾರ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ನಿಮ್ಮ ಯಾವ ಧಾರಾವಾಹಿ ಅವರು ಇಷ್ಟಪಡುತ್ತಾರೆ. ಕಿಂಗ್ಕೊಯ್ಲಿ. 1 ಫ್ರೇಮ್ನಲ್ಲಿ ಇಬ್ಬರು ಐಕಾನ್ಗಳು. ನಮ್ಮ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಿಗೆ ಅಪ್ರತಿಮ ನಟಿ ಇಷ್ಟೊಂದು ಗೌರವ ನೀಡುವುದನ್ನು ನೋಡಲು ತುಂಬಾ ಸಂತೋಷವಾಗಿದ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮುಂಬರುವ ಎರಡು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಗಾಗಿ ವಿರಾಟ್ ಚೆನ್ನೈ ತಲುಪಿದ್ದಾರೆ. ಮೊದಲ ಪಂದ್ಯ ಸೆಪ್ಟೆಂಬರ್ 19ರಂದು ನಡೆಯಲಿದೆ. ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಕೊಹ್ಲಿ ಚೆನ್ನೈನಲ್ಲಿ ಟೆಸ್ಟ್ ಪಂದ್ಯ ಆಡಲಿದ್ದಾರೆ. ರಾಧಿಕಾ ಶರತ್ಕುಮಾರ್ ಅವರು ತಮಿಳಿನಲ್ಲಿ ಮೆರ್ರಿ ಕ್ರಿಸ್ಮಸ್ ಹಾಗೂ ತೆಲುಗಿನಲ್ಲಿ ಆಪರೇಷನ್ ರಾವನ್, ಮಲಯಾಳಂನಲ್ಲಿ ಚಿತ್ರವೊಂದರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್)