

ಮಂಗಳೂರು: ತಮ್ಮ ಮುಂದಿನ ಚಿತ್ರಗಳಾದ ಮ್ಯಾಟ್ನಿ(Matniee) ಮತ್ತು ಬ್ಯಾಡ್ ಮ್ಯಾನರ್ಸ್(Bad Manners) ಚಿತ್ರಗಳ ಯಶಸ್ಸಿಗಾಗಿ, ತುಳುನಾಡಿನ ಆರಾಧ್ಯದೈವ ಕೊರಗಜ್ಜನ ಸನಿಧಿಗೆ ಇಂದು ನಟಿ ರಚಿತಾ ರಾಮ್(Rachita Ram) ಭೇಟಿ ನೀಡಿದ್ದಾರೆ.
"ನನ್ನ ಸ್ನೇಹಿತರೆಲ್ಲರು ಹೇಳಿದ್ರು, ಇಲ್ಲಿನ ಕೊರಗಜ್ಜನ(Koragajja) ಸನಿಧಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹಳ ಪವರ್ಫುಲ್ ಕೊರಗಜ್ಜ ಅಂತ ಹಾಗಾಗಿ ಭೇಟಿ ನೀಡಿದೆ" ಎಂದು ರಚಿತಾ ಹೇಳಿದರು.
"ಈ ಜಾಗವನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಇಲ್ಲಿನ ವಾತವಾರಣ ಬಹಳ ಪಾಸಿಟಿವ್ ಆಗಿದೆ. ಮೊದಲ ಬಾರಿಗೆ ಬಂದಿದ್ದು ನನಗೆ ಖುಷಿ ಕೊಟ್ಟಿದೆ. ಮಂಗಳೂರಿಗೆ ಬರಲು ನನಗೆ ಅಜ್ಜಯ್ಯ ಅಷ್ಟು ಪರಿಚಯವಿರಲಿಲ್ಲ, ಇವಾಗ ನನ್ನ ಸ್ನೇಹಿತರು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅದಕ್ಕೆ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ" ಎಂದು ಹೇಳಿದರು.
ತಮ್ಮ ಮುಂದಿನ ಸಿನಿಮಾಗಳಾದ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಈ ವರ್ಷದ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಟಿ ರಚಿತಾ ರಾಮ್ ಸುದ್ದಿಗಾರರಿಗೆ ತಿಳಿಸಿದರು. (ಏಜೆನ್ಸೀಸ್)