More

    ಪುರುಷರಂತೆ ವೇಷ ಧರಿಸಿ ಅತ್ತೆ ಕಥೆ ಮುಗಿಸಿದ ಸೊಸೆ!

    ತಿರುನಲ್ವೇಲಿ: ಅತ್ತೆ ಸೊಸೆ ಜಗಳ ಎನ್ನುವ ವಿಚಾರ ಅನಾದಿ ಕಾಲದ್ದು. ಇದೇ ಅನೇಕ ಧಾರಾವಾಹಿನಿಗಳ ಕಥಾವಸ್ತು ಎಂದು ಹೀಗಳೆಯುವವರೂ ಇದ್ದಾರೆ. ಈ ನಡುವೆ ಇಲ್ಲೊಬ್ಬ ಮಹಿಳೆ ಬಹು ಹಿಂದಿನ ದ್ವೇಷವನ್ನು ತೀರಿಸಲು ಪುರುಷರಂತೆ ವೇಷ ಧರಿಸಿ ತನ್ನ ಅತ್ತೆಯನ್ನೇ ಕೊಂದಿದ್ದಾರೆ.

    ಏನಿದು ಪ್ರಕರಣ?

    ಅತ್ತೆಯನ್ನು ಕೊಂದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಮಂಗಳವಾರ ತಿರುನಲ್ವೇಲಿಯಲ್ಲಿ 28 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಸೋಮವಾರ ಮುಂಜಾನೆ ಮಹಿಳೆ ಸೀತಾಲಕ್ಷ್ಮಿ ಮೇಲೆ ಗಟ್ಟಿಯಾದ ಪೈಪ್‌ನಿಂದ ಹಲ್ಲೆ ನಡೆಸುವಾಗ ಬಂಧಿತ ಮಹಾಲಕ್ಷ್ಮಿ ಪುರುಷರ ವೇಷದಲ್ಲಿದ್ದು ಹೆಲ್ಮೆಟ್ ಧರಿಸಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: 

    ಮಂಗಳವಾರ ಗಾಯಗೊಂಡ 58 ವರ್ಷದ ಸೀತಾಲಕ್ಷ್ಮಿ ಅವರು ತುಳುಕಾಕುಳಂ ಪಂಚಾಯತ್ ಉಪಾಧ್ಯಕ್ಷ ಷಣ್ಮುಗವೇಲ್ ಅವರ ಪತ್ನಿ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಹಾಲಕ್ಷ್ಮಿ ಆರಂಭದಲ್ಲಿ ತನ್ನ ಚಿನ್ನದ ಸರಕ್ಕಾಗಿ ತನ್ನ ಅತ್ತೆಯನ್ನು ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಹೇಳುವ ಮೂಲಕ ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದರು.

    ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದಾಗ, ಟ್ರ್ಯಾಕ್‌ಸೂಟ್, ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬರು ಮನೆಗೆ ಪ್ರವೇಶಿಸುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ. ಆದರೆ ಈ ನಾಟಕವೂ ತನಿಖಾಧಿಕಾರಿಗಳ ಎದುರು ತುಂಬಾ ಹೊತ್ತು ನಿಂತಿಲ್ಲ. ಕಡೆಗೆ ಅವರು ದಾಳಿ ಮಾಡಿದವರು ತನ್ನ ಗಂಡನ ಉಡುಗೆಯನ್ನು ಧರಿಸಿದ್ದ ಮಹಾಲಕ್ಷ್ಮಿ ಎಂದು ಕಂಡುಹಿಡಿದಿದ್ದಾರೆ.

    ಸತ್ಯ ಬೆಳಕಿಗೆ ಬಂದದ್ದು ಹೇಗೆ?

    “ಸೀತಾಲಕ್ಷ್ಮಿಯವರ ಪತಿ ಷಣ್ಮುಗವೇಲ್ ಅವರು ದನದ ಕೊಟ್ಟಿಗೆಯಲ್ಲಿ ಹೊರಗೆ ಬಂದವರು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ಅವರ ಹೆಂಡತಿ ನೆಲದ ಮೇಲೆ ತಲೆಯಿಂದ ರಕ್ತ ಸೋರಿಕೆಯಾಗಿ ಬಿದ್ದಿರುವುದನ್ನು ಕಂಡರು. ಸಹಾಯಕ್ಕಾಗಿ ಕಿರುಚಿಕೊಂಡ ತಕ್ಷಣ ಮಹಾಲಕ್ಷ್ಮಿ ಕೂಡ ಧಾವಿಸಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ನೆರೆಹೊರೆಯವರು ಸ್ಥಳಕ್ಕಾಗಮಿಸಿದಾಗ, ಅಪರಿಚಿತ ವ್ಯಕ್ತಿಗಳು ತಾನು ಧರಿಸಿದ್ದ ಚಿನ್ನದ ಸರಕ್ಕಾಗಿ ಅತ್ತೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ, ”ಎಂದು ಅಧಿಕಾರಿಯೊಬ್ಬರು ಹೇಳಿದರು.

    ನೆರೆಹೊರೆಯವರು ಸೀತಾಪರ್ಪಲನಲ್ಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಗಾಯಗೊಂಡ ಮಹಿಳೆಯನ್ನು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಹಾಲಕ್ಷ್ಮಿ ಮತ್ತು ಸೀತಾಲಕ್ಷ್ಮಿ ಅವರ ನಡುವೆ ಉತ್ತಮ ಸಂಬಂಧವಿಲ್ಲ ಮತ್ತು ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ .

    ಪುರುಷರಂತೆ ವೇಷ ಧರಿಸಿ ಅತ್ತೆ ಕಥೆ ಮುಗಿಸಿದ ಸೊಸೆ!

    ಸೀತಾಲಕ್ಷ್ಮಿ ಅವರ ಮಗ ರಾಮಸ್ವಾಮಿಯನ್ನು ಮದುವೆಯಾದ ದಿನದಿಂದಲೂ ಮಹಾಲಕ್ಷ್ಮಿ ತನ್ನ ಅತ್ತೆಯ ಮೇಲೆ ದ್ವೇಷ ಸಾಧಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಆಸ್ತಿ ವಿಚಾರಗಳು ಅವುಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಬಲವಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.

    ಪೊಲೀಸರು ಮಹಾಲಕ್ಷ್ಮಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆಕೆಯನ್ನು ಕೊಕ್ಕಿರಾಕುಲಂನ ಮಹಿಳಾ ಕಾರಾಗೃಹಕ್ಕೆ ಕಳುಹಿಸಲಾಯಿತು. ರಾಮಸಾಮಿ ಮತ್ತು ಮಹಾಲಕ್ಷ್ಮಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts