ಕುಡಿದ ಮತ್ತಿನಲ್ಲಿ ವಧುವಿನ ಬದಲು ಅತ್ತಿಗೆಯ ಕೊರಳಿಗೆ ಹಾರ ಹಾಕಿದ ವರ! ಮುಂದೇನಾಯ್ತು ನೀವೇ ನೋಡಿ...

Drunken Groom
Published on

ಪಟನಾ: ಮದುವೆ ಸಂದರ್ಭದಲ್ಲಿ ಅನೇಕ ಹಾಸ್ಯಮಯ ಹಾಗೂ ವಿಚಿತ್ರ ಘಟನೆಗಳು ಸಹ ಕ್ಯಾಮೆರಾದಲ್ಲಿ ಸರೆಯಾಗುತ್ತವೆ. ಅಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಾನಮತ್ತ ವರನೊಬ್ಬ ಮದುವೆ ಮಂಟಪದ ವೇದಿಕೆಯಲ್ಲೇ ತೂರಾಡುತ್ತಾ ವಧುವಿನ ಕೊರಳಿಗೆ ಹೂವಿನ ಹಾರ ಹಾಕುವ ಬದಲು ಅತ್ತಿಗೆ ಕೊರಳಿಗೆ ಹಾಕುತ್ತಾನೆ. ಇದರಿಂದ ಆಕ್ರೋಶಕ್ಕೆ ಒಳಗಾಗು ಅತ್ತಿಗೆ, ವೇದಿಕೆಯಲ್ಲೇ ವರನನ್ನು ಹಿಡಿದು ಥಳಿಸುವ ದೃಶ್ಯ ವಿಡಿಯೋದಲ್ಲಿದೆ.

ವರ ತನ್ನ ಕಾಲಮೇಲೆ ತಾನೇ ನಿಲ್ಲದಷ್ಟು ಕಂಠಪೂರ್ತಿ ಕುಡಿದಿದ್ದ. ವರ ತೂರಾಡುವುದನ್ನು ವಧು, ಮೂಕ ಪ್ರೇಕ್ಷಕಳಾಗಿ ನೋಡುತ್ತಾ ನಿಂತಿದ್ದಳು. ಅತ್ತಿಗೆ ಬಾರಿಸಿದ ಬಳಿಕ ವರ ಹಾಕಿದ್ದ ಹಾರವನ್ನು ವಾಪಸ್​ ತೆಗೆದುಕೊಂಡನು. ಇದು ತಮಾಷೆಗಾಗಿ ಮಾಡಿದ್ದೋ ಅಥವಾ ವರ ನಿಜವಾಗಿಯೋ ಕುಡಿದಿದ್ದನೋ ಖಚಿತವಾಗಿಲ್ಲ. ಆದರೆ, ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Vikki1975 ಹೆಸರಿನ ಟ್ವಿಟರ್​ನಲ್ಲಿ ವಿಡಿಯೋ ಅಪ್​ಲೋಡ್​ ಆಗಿದ್ದು, ಈವರೆಗೂ 39 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್ ಸುರಿಮಳೆಗೈದಿದ್ದಾರೆ.

ಇದೇ ರೀತಿ ಮೊನ್ನೆ ನಡೆದ ಘಟನೆಯೊಂದರಲ್ಲಿ ವಧುವೊಬ್ಬಳು ವರಮಾಲಾ ಸಮಾರಂಭದಲ್ಲಿ ವರನಿಗೆ ಕಪಾಳಮೋಕ್ಷ ಮಾಡಿ ನಂತರ ವೇದಿಕೆಯಿಂದ ಕೆಳಗಿಳಿದಿದ್ದಳು. ಈ ಘಟನೆಯಿಂದ ಮದುವೆ ಸಂಭ್ರಮಕ್ಕೆ ತೆರೆ ಬಿದ್ದಿತ್ತು. ಈ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net