ಮಳೆಯಿಂದ ಕುಸಿದ ರಸ್ತೆಯ ಹಳ್ಳಕ್ಕೆ ಬಿದ್ದ ಟ್ರಕ್​: ಭಯಾನಕ ವಿಡಿಯೋ ವೈರಲ್​!

Truck
Published on

ನವದೆಹಲಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ದೆಹಲಿಯ ನಜಾಫಗಢದ ರಸ್ತೆ ಕುಸಿದು ನಿರ್ಮಾಣವಾಗಿದ್ದ ಹಳ್ಳದಲ್ಲಿ ಟ್ರಕ್​ ಉರುಳಿಬಿದ್ದಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿಯೇ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

ಟ್ರಕ್​ ಹಳ್ಳಕ್ಕೆ ಬಿದ್ದಿರುವ ಫೋಟೋವನ್ನು ಗುರುವಾರ ಬಿಡುಗಡೆ ಮಾಡಿದ್ದು, ಈಗಲೂ ಟ್ರಕ್​ ಹಳ್ಳದಲ್ಲೇ ಇದೆ. ತೌಕ್ತೆ ಚಂಡಮಾರುತದ ಪರಿಣಾಮದಿಂದ ಗುರುವಾರ ರಾತ್ರಿ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ದೆಹಲಿಯ ಅನೇಕ ಏರಿಯಾಗಳು ಜಲಾವೃತಗೊಂಡಿದೆ.

ಮಳೆಯಿಂದ ನಜಾಫಗಢದ ರಸ್ತೆ ಕುಸಿದು ಹಳ್ಳ ನಿರ್ಮಾಣವಾಗಿದೆ. ಈ ಏರಿಯಾದಲ್ಲಿ ನಿರ್ಮಾಣ ಮಾಡುತ್ತಿದ್ದ ಮೆಟ್ರೋದಿಂದಾಗಿ ರಸ್ತೆ ಕುಸಿದಿದೆ ಎಂದು ಹೇಳಲಾಗಿದ್ದು, ದೆಹಲಿ ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ಜರುಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net