ಕಹಿ ಅನುಭವ: ಚಾಲಕನ ವಿರುದ್ಧ ಆರೋಪ ಮಾಡಿ ಉಬರ್​ ನೆರವು ಕೋರಿದ ನಟಿ ಸ್ವರಾ ಭಾಸ್ಕರ್​

Swara
Published on

ಮುಂಬೈ: ಉಬರ್​ ಚಾಲಕನ ವಿರುದ್ಧ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಅವರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಸ್ವರಾ, ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ಬೀಡುಬಿಟ್ಟಿದ್ದು, ಕೆಲವೇ ಗಂಟೆಗಳ ಹಿಂದೆ ಸಹಾಯ ಕೋರಿ ಉಬರ್​ಗೆ ಟ್ವೀಟ್​ ಮಾಡಿದ್ದಾರೆ.

ಹಾಯ್​ ಉಬರ್​ ಸಪೋರ್ಟ್​, ನಾನು ಮೊದಲೇ ಸೇರಿಸಿದ ಹೆಚ್ಚುವರಿ ನಿಲುಗಡೆ ಪ್ರದೇಶದಲ್ಲಿ ಇರುವಾಗಲೇ ಲಾಸ್​ ಏಂಜಲೀಸ್​ನಲ್ಲಿರುವ ನಿಮ್ಮ ಚಾಲಕರೊಬ್ಬರು ನನ್ನ ದಿನಸಿ ಪದಾರ್ಥಗಳನ್ನು ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ನಿಮ್ಮ ಅಪ್ಲಿಕೇಶನ್‌ನಲ್ಲಿ ಇದನ್ನು ವರದಿ ಮಾಡಲು ನಮಗೆ ಯಾವುದೇ ಮಾರ್ಗವಿಲ್ಲ ಎಂದು ತೋರುತ್ತಿದೆ. ಇದು ಕಳೆದುಹೋದ ಐಟಂ ಅಲ್ಲ, ಅವನು ಸುಮ್ಮನೆ ತೆಗೆದುಕೊಂಡು ಹೋಗಿದ್ದಾನೆ. ನನ್ನ ವಸ್ತುಗಳನ್ನು ನನಗೆ ಮರಳಿ ತಂದುಕೊಡುವಿರಾ ಎಂದು ಕೇಳಿದ್ದು, #touristproblems ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಉಬರ್​ಗೆ ಟ್ವೀಟ್​ ಮಾಡಿದ್ದಾರೆ.

ಅಂದಹಾಗೆ ಉಬರ್​ ಗ್ರಾಹಕರು ತಮ್ಮ ಮಾರ್ಗದಲ್ಲಿ ಎರಡು ಹೆಚ್ಚುವರಿ ನಿಲ್ದಾಣಗಳನ್ನು ಸೇರಿಸಬಹುದು.

ಇನ್ನು ಸ್ವರಾ ಟ್ವೀಟ್​ಗೆ ಉಬರ್​ ಪ್ರತಿಕ್ರಿಯೆ ನೀಡಿದ್ದು, ನಾವು ಸ್ವರಾ ಅವರೊಂದಿಗೆ ವೈಯಕ್ತಿಕ ಸಂದೇಶದೊಂದಿಗೆ ಸಂಪರ್ಕದಲ್ಲಿದ್ದೇವೆ. ನಿಮ್ಮ ಈ ಅನುಭವ ಖಂಡಿತವಾಗಿಯೂ ನಮ್ಮ ಮಾನದಂಡಗಳಿಗೆ ಅನುಗುಣವಾಗಿಲ್ಲ. ತಕ್ಷಣ ಈ ಬಗ್ಗೆ ಗಮನಹರಿಸಿ, ನಿಮ್ಮ ಸಮಸ್ಯೆಯನ್ನುಯ ಬಗೆಹರಿಸುತ್ತೇವೆ ಎಂದಿದೆ.

ಇನ್ನು ಸ್ವರಾ ಭಾಸ್ಕರ್​ ಅವರು ಬಾಲಿವುಡ್​ನಲ್ಲಿ ಬೋಲ್ಡ್​ ಪಾತ್ರಗಳಿಂದ ಸುದ್ದಿಯಾಗಿದ್ದಾರೆ. ವೀರ್​ ದಿ ವೆಡ್ಡಿಂಗ್​, ಅನಾರ್ಕಲಿ ಆಫ್​ ಅರಾಹ್​ ಮತ್ತು ನಿಲ್ಲ ಬಟ್ಟಿ ಸನ್ನತಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಆಗಾಗ ಪ್ರಚಲಿತ ಘಟನೆಗಳ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ಟ್ವೀಟ್​ ಮಾಡುವ ಮೂಲಕ ವಿವಾದಗಳನ್ನು ಹುಟ್ಟುಹಾಕುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಮಾತನಾಡಿ ಸ್ವರಾ ಟ್ರೋಲ್​ ಆಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net