

ನ್ಯೂಯಾರ್ಕ್: 22 ವರ್ಷದ ರೆಬೆಕ್ಕಾ ಡಿಕ್ಸಾನ್ ಎಂಬ ಯುವತಿ ಅಮೆರಿಕದಲ್ಲಿ ಕೈತುಂಬಾ ಸಂಬಳ ಬರುವಂತಹ ವಿಚಿತ್ರ ಉದ್ಯೋಗವೊಂದನ್ನು ಪಡೆದುಕೊಳ್ಳುವ ಮೂಲಕ ಭಾರಿ ಸುದ್ದಿಯಾಗಿದ್ದಾಳೆ.
ಸ್ಕಾಟ್ಲೆಂಡ್ ಮೂಲದ ರೆಬೆಕ್ಕಾ 90 ಸಾವಿರ ಅರ್ಜಿಗಳ ಪೈಪೊಟಿ ನಡುವೆ ವಿಚಿತ್ರ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ರೆಬೆಕ್ಕಾ ಪಡೆದುಕೊಂಡ ಆ ವಿಚಿತ್ರ ಉದ್ಯೋಗ ಯಾವುದೆಂದರೆ, ಅಶ್ಲೀಲ ವಿಡಿಯೋಗಳನ್ನು ನೋಡುವುದು. ಇದನ್ನು ಕೇಳಿ ನಿಮ್ಮ ಹುಬ್ಬೇರುವುದು ಖಂಡಿತ. ಹೆಚ್ಚಿನ ಮಾಹಿತಿ ಮುಂದಿದೆ ಓದಿ.
ಅಡಲ್ಟ್ (ವಯಸ್ಕ) ಇಂಡಸ್ಟ್ರಿಗೆ ಸಂಬಂಧಿದ ವಿಡಿಯೋಗಳ ಮೇಲೆ ಸಂಶೋಧನೆ ಮಾಡುವುದು ರೆಬೆಕ್ಕಾ ಕೆಲಸವಾಗಿದೆ. ಲೈಂಗಿಕ ಸಂಭೋಗದ ಭಂಗಿಗಳು, ಸಮಯ, ಲೈಂಗಿಕ ಕ್ರಿಯೆ, ವಿಡಿಯೋ ಅನುಪಾತ, ವಿಡಿಯೋ ಗುಣಮಟ್ಟ ಮತ್ತು ಸಂಭೋಗೋದ್ರೇಕದ ಪರಾಕಾಷ್ಠೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಬೇಕಿದೆ.
ತನ್ನ ಉದ್ಯೋಗದ ಬಗ್ಗೆ ಮಾತನಾಡಿರುವ ರೆಬೆಕ್ಕಾ, ಎಲ್ಲರಿಗೂ ದೊರೆಯದ ಕೆಲಸ ನನಗೆ ಸಿಕ್ಕಿದೆ ಎಂದಿದ್ದಾರೆ. ಅಶ್ಲೀಲ ವಿಡಿಯೋ ನೋಡುವವರಿಗೆ ಸಂಬಳ ಕೊಡುತ್ತಾರೆ ಎಂಬುದನ್ನು ಯಾರು ತಾನೇ ಊಹೆ ಮಾಡಿಕೊಳ್ಳುತ್ತಾರೆ. ನಿಜಕ್ಕೂ ನಾನು ಕೂಡ ಶಾಕ್ ಆಗಿದ್ದೆ. ನಮ್ಮದೊಂದು ಸಣ್ಣ ಪಟ್ಟಣವಾಗಿದೆ. ಅಲ್ಲಿ ಇಂತಹ ಸಂಗತಿಗಳು ತಿಳಿದೇ ಇಲ್ಲ. ಈ ಪ್ರಾಜೆಕ್ಟ್ನಲ್ಲಿ ಭಾಗವಾಗಲು ತುಂಬಾ ಸಂತೋಷವಾಗುತ್ತಿದೆ ಎಂದು ರೆಬೆಕ್ಕಾ ಹೇಳಿದ್ದಾರೆ.
ಅಂದಹಾಗೆ ಈ ಕೆಲಸಕ್ಕೆ ರೆಬೆಕ್ಕಾಗೆ ಗಂಟೆಗೆ 1500 ರೂ. ಚಾರ್ಜ್ ಮಾಡಲಾಗುತ್ತದೆ. ಮೊದಲ ಕೆಲಸದ ಹಂಚಿಕೆ ಮಾಡಲಾಗಿದ್ದು, ಹೆಚ್ಚು ವೀಕ್ಷಣೆ ಪಡೆದ ಲೈಂಗಿಕ ಭಂಗಿಗಳು, ಹೆಚ್ಚು ವೀಕ್ಷಣೆ ಕಂಡ 100 ವಿಡಿಯೋಗಳ ವೀಕ್ಷಣಾ ಸಮಯ ಸೇರಿದಂತೆ ಕೆಲವು ವಿಚಾರಗಳ ಮೇಲೆ ಸಂಶೋಧನೆ ನಡೆಸಬೇಕಿದೆ.
ಈ ಕೆಲಸದ ಬಗ್ಗೆ ತಿಳಿದವರು ಇಂತಹ ಕೆಲಸವು ಇದೆಯಾ ಎಂದು ಹುಬ್ಬೇರಿಸುತ್ತಿದ್ದಾರೆ. ಈ ಕೆಲಸ ಗಿಟ್ಟಿಸಿದ ರೆಬೆಕ್ಕಾ ಇದೀಗ ಎಲ್ಲೆಡೆ ವೈರಲ್ ಆಗಿದ್ದಾರೆ. (ಏಜೆನ್ಸೀಸ್)