ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್​ ಕುನ್ನತ್​ ಇನ್ನಿಲ್ಲ: ಕಾರ್ಯಕ್ರಮದ ಬೆನ್ನಲ್ಲೇ ಕುಸಿದುಬಿದ್ದ ಸಾವು​

Singer KK
Published on

ಕೋಲ್ಕತ: ಕೆಕೆ ಎಂದೇ ಖ್ಯಾತರಾಗಿದ್ದ ಬಾಲಿವುಡ್​ ಗಾಯಕ ಕೃಷ್ಣಕುಮಾರ್​ ಕುನ್ನತ್​ ಅವರು ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದ ಕಾರ್ಯಕ್ರಮದ ಬೆನ್ನಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಿನ್ನೆ (ಮೇ.31) ಸಂಜೆ ನಡೆದಿದೆ.

ಕೆಕೆ ಅವರಿಗೆ 53 ವರ್ಷ ವಯಸ್ಸಾಗಿತ್ತು. ಖ್ಯಾತ ಹಿನ್ನೆಲೆ ಗಾಯಕರಾಗಿರುವ ಕೆಕೆ, ನಿನ್ನೆ ಕೋಲ್ಕತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬೆನ್ನಲ್ಲೇ ಕುಸಿದು ಬಿದ್ದ ಕೆಕೆ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಕೋಲ್ಕತದ ಸಿಎಂಆರ್​ಐ ಆಸ್ಪತ್ರೆಗೆ ರಾತ್ರಿ 10.30ರ ಸುಮಾರಿಗೆ ಕೆಕೆ ಅವರನ್ನು ಕರೆತಂದಾಗ ಅವರಾಗಲೇ ಮೃತಪಟ್ಟಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಕೋಲ್ಕತದ ನಜ್ರುಲ್ ಮಂಚದಲ್ಲಿ ನಡೆದ ಅವರ ಸಂಗೀತ ಕಚೇರಿಯ ಫೋಟೋಗಳನ್ನು ಕೆಕೆ ಅವರು ನಿನ್ನೆ ಪೋಸ್ಟ್ ಮಾಡಿದ್ದರು. ಕೆಕೆ ಅವರು ಭಾರತೀಯ ಚಿತ್ರರಂಗದ ಬಹುಮುಖ ಗಾಯಕರಲ್ಲಿ ಒಬ್ಬರು. 1999 ರಲ್ಲಿ ಬಿಡುಗಡೆಯಾದ ಅವರ ಮೊದಲ ಆಲ್ಬಂ ಸಾಂಗ್​ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. 2000ರ ದಶಕದ ಆರಂಭದಿಂದ ಕೆಕೆ ಅವರು ಹಿನ್ನೆಲೆ ಗಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಬಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಕೆಕೆ ತಮ್ಮ ಧ್ವನಿ ನೀಡಿದ್ದಾರೆ.

ಮೃತರ ಸಾವಿಗೆ ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ಸಿನಿರಂಗದ ಕಲಾವಿದರಿಂದ ಸಂತಾಪಗಳು ಹರಿದುಬರುತ್ತಿವೆ. ಕೆಕೆ ಎಂದೇ ಖ್ಯಾತರಾಗಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್​ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರಲ್ಲೂ ವ್ಯಾಪಕವಾದ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಕೋಲ್ಕತದಲ್ಲಿ ಪ್ರದರ್ಶನ ನೀಡುತ್ತಿರುವಾಗ ಅನಾರೋಗ್ಯಕ್ಕೆ ಒಳಗಾಗಿ ಕೆಕೆ ನಿಧನರಾದ ಸುದ್ದಿ ಕೇಳಲು ದುರಂತವಾಗಿದೆ. ಜೀವನವು ಎಷ್ಟು ಸೂಕ್ಷ್ಮ ಎಂಬುದಕ್ಕೆ ಮತ್ತೊಂದು ಜ್ಞಾಪನೆ ಇದು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನಟ ಅಕ್ಷಯ್​ ಕುಮಾರ್​, ಗಾಯಕ ಅರ್ಮಾನ್​ ಮಲ್ಲಿಕ್​ ಸೇರಿದಂತೆ ಅನೇಕರು ಟ್ವೀಟ್​ ಮೂಲಕ ಸಂತಾಪಗಳನ್ನು ಸೂಚಿಸುತ್ತಿದ್ದಾರೆ. (ಏಜೆನ್ಸೀಸ್​)

Koo App
Tragic to hear about the passing away of KK after falling ill while performing in Kolkata. Another reminder of how fragile life is. Condolences to his family and friends. Om Shanti.
View attached media content
-Virender Sehwag (@VirenderSehwag)31 May 2022
Koo App
Shocked & Deeply saddened by the sudden demise of talented singer KK. 💔 We lost a great voice today. My condolences to his family members & admirers. #OmShanti 🙏
View attached media content
-Madhur Bhandarkar (@imbhandarkar)1 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net