ಒಂದೇ ಉಸಿರಲಿ ಹನುಮಾನ್ ಚಾಲೀಸಾ ಹಾಡಿದ ಶಂಕರ್ ಮಹಾದೇವನ್

Shankar Mahadevan
Published on

ಖ್ಯಾತ ಹಿನ್ನೆಲೆ ಗಾಯಕ ಮತ್ತು ಅತ್ಯುತ್ತಮ ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಅವರು ನಮ್ಮೆಲ್ಲರಿಗೂ ಗೊತ್ತೇ ಇದೆ. ಸಂಗೀತ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಹಲವಾರು ಪ್ರಶಸ್ತಿಗಳನ್ನು ತಬ್ಬಿದ್ದಾರೆ. ಅವರ ಸಂಗೀತಕ್ಕೆ ಮಾರುಹೋಗದವರೇ ಇಲ್ಲ. ಕೇವಲ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ.

ಒಂದೇ ಉಸಿರಲ್ಲಿ ಹಾಡುವ ಪರಿಕಲ್ಪನೆಯನ್ನು ಬಾಲಿವುಡ್ ಗೆ ಪರಿಚಯಿಸಿದ ಕೀರ್ತಿ ಇವರಿಗಿದೆ. ಈಗ ಅದೇ ಸಾಲಿನಲ್ಲಿ, ಶಂಕರ್ ಮಹಾದೇವನ್ ಮೊದಲ ಬಾರಿಗೆ ಒಂದೇ ಉಸಿರಲ್ಲಿ ಹನುಮಾನ್ ಚಾಲೀಸಾವನ್ನು ಹಾಡಿದ್ದು, ಅದರ ವೀಡಿಯೊ ಮಂಗಳವಾರ ಬಿಡುಗಡೆಯಾಗಿದೆ. ಅವರ ವೀಡಿಯೊವನ್ನು ಕೂ ಶೇಮರು ಭಕ್ತಿ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ವೀಡಿಯೊದಲ್ಲಿ ಶಂಕರ್ ಮಹಾದೇವನ್ ಅವರು ಅದ್ಭುತವಾದ ಹನುಮಾನ್ ಚಾಲೀಸಾವನ್ನು ಹಾಡುತ್ತಿದ್ದಾರೆ. ಈ ವಿಶಿಷ್ಟವಾದ ಹನುಮಾನ್ ಚಾಲೀಸಾವನ್ನು ಶೇಮರು ಭಕ್ತಿಯ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಸಹ ಸ್ಟ್ರೀಮ್ ಮಾಡಲಾಗುತ್ತದೆ.

Koo App
जय श्री राम 🕉️ 😇 #HanumanJayantiSpecial गायक - शंकर महादेवन जी के आवाज़ में रामभक्त बजरंगबली को समर्पित हनुमान चालीसा (ब्रेथ्लेस) रिलीज़ हो चुकी है । https://youtu.be/xdtHK7AJINA Music Director: Dr. Sanjayraj Gaurinandan #goddess #bajrangbali #newsong #launch #hanuman #god #ram #jaishriram #ShankarMahadevan #BreathlessHanumanChalisa
View attached media content
-Shemaroo Bhakti (@shemaroobhakti)12 Apr 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net