ಕರ್ನಾಟಕದ ಮಗಳು ಆಂಧ್ರ ಸಚಿವೆ! ಜಗನ್​ಮೋಹನ್​ ರೆಡ್ಡಿ ಸಂಪುಟದಲ್ಲಿ ತಾಯಕನಹಳ್ಳಿಯ ಉಷಾ ದರ್ಬಾರ್​

usha charan
Published on

ಕಾನಹೊಸಹಳ್ಳಿ(ವಿಜಯನಗರ): ಕರ್ನಾಟಕದ ಮೊಮ್ಮಗಳಿಗೆ ನೆರೆಯ ಆಂಧ್ರಪ್ರದೇಶದ ಸಚಿವೆ ಸ್ಥಾನ ಒಲಿದಿದೆ. ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಮೂಲದ ಉಷಾ ಚರಣ್​ ಆಂಧ್ರ ಪ್ರದೇಶದ ಜಗನ್​ ಮೋಹನ್​ ರೆಡ್ಡಿ ಸರ್ಕಾರದಲ್ಲಿ ಸೋಮವಾರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಉಷಾ, ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಕೆ.ವಿರೂಪಾಕ್ಷಪ್ಪರ ಪುತ್ರಿ. ಉಷಾ ಅವರ ತಾಯಿ ಆಂಧ್ರದವರು. ಉಷಾ ಈಗ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ತಾಯಕನಹಳ್ಳಿಯ ಕುರುಬ ಸಮುದಾಯದ ಮುಖಂಡ ಮಂಜುನಾಥ, ತವರು ಮನೆಯನ್ನು ಉಷಾ ಚರಣ್​ ಮರೆತಿಲ್ಲ. ಕಳೆದ ತಿಂಗಳು ಅವರು ಊರಿಗೆ ಬಂದು ಹೋಗಿದ್ದಾರೆ. ನಮ್ಮೂರ ಮಗಳು ಆಂಧ್ರ ಸರ್ಕಾರದಲ್ಲಿ ಸಚಿವೆ ಆಗಿರುವುದಕ್ಕೆ ಎಲ್ಲರಿಗೂ ಸಂತಸವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net