ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

car
Published on

ಬಣಕಲ್​(ಮೂಡಿಗೆರೆ): ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಲ್ಲಿ ಸರ್ಕಾರಿ ಲಾಂಛನ ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಹುಣಸೂರು ತಾಲೂಕಿನ ಹಳೆಬೀಡು ಗ್ರಾಪಂ ಅಧ್ಯಕ್ಷ ತನ್ನ ಖಾಸಗಿ ವಾಹನಕ್ಕೆ ಸರ್ಕಾರಿ ಲೋಗೋ ಮತ್ತು ನಾಮ ಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದಿದ್ದಾರೆ.

ಸರ್ಕಾರಿ ಲಾಂಛನವನ್ನು ತಮ್ಮ ಕಾರಿಗೆ ಹಾಕಿಕೊಂಡು ಪ್ರವಾಸಕ್ಕೆ ಬಂದಿರುವ ಗ್ರಾಪಂ ಅಧ್ಯಕ್ಷ ಕೊಟ್ಟಿಗೆಹಾರ ಮಾರ್ಗವಾಗಿ ಹೊರನಾಡು ಕಡೆ ಸಾಗಿದ್ದಾರೆ. ವಾಹನದ ಹಿಂಬದಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಳೆಬೀಡು, ಹುಣಸೂರು ತಾಲೂಕು ಎಂದು ಹಾಕಲಾಗಿದೆ. ಮುಂಭಾಗದಲ್ಲಿ ಹೆಸರಿನ ಜತೆಗೆ ರಾಜ್ಯ ಸರ್ಕಾರದ ಲಾಂಛನ ಹಾಕಲಾಗಿದೆ. ಗ್ರಾಪಂ ಅಧ್ಯಕ್ಷನ ನಡೆ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net