More

    ಮಗಳೇ, ಬಾರವ್ವ ಆ ಕಾಮುಕನಿಗೆ ತಕ್ಕ ಪಾಠ ಕಲಿಸೋಣ… ಎನ್ನುತ್ತಾ ಕೋಣೆಗೆ ಹೋದ ತಂದೆಗೆ ಕಾದಿತ್ತು ಆಘಾತ!

    ಶಿವಮೊಗ್ಗ: ಮಗಳೇ ಹೆದರ ಬೇಡ. ಆ ಕಿಡಿಗೇಡಿಗೆ ತಕ್ಕ ಪಾಠ ಕಲಿಸೋಣ. ನೀನು ಬೇಗ ರೆಡಿಯಾಗಿ ಬಾ, ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡೊಣ. ಆ ಕಾಮುಕ ಕಿಡಿಗೇಡಿಗೆ ಪೊಲೀಸರೇ ಬುದ್ಧಿಕಲಿಸುತ್ತಾರೆ… ಎಂದು ನೊಂದ ಮಗಳಿಗೆ ತಂದೆ ಸಾಂತ್ವನ ಹೇಳಿದ್ದರು. ಆಯ್ತಪ್ಪ ಎಂದು ಕೋಣೆಯೊಳಗೆ ಹೋದ ಮಗಳು ಜೀವಂತವಾಗಿ ವಾಪಸ್​ ಬಾರಲೇ ಇಲ್ಲ… ಮಗಳ ಶವ ಕಂಡ ತಂದೆ ಆಘಾತಕ್ಕೊಳಗಾಗಿದ್ದು, ನೋವಲ್ಲೂ ಆ ಕಿಡಿಗೇಡಿಗೆ ಶಿಕ್ಷೆ ಕೊಡಿಸಲು ಹೋರಾಡುತ್ತಿದ್ದಾರೆ.

    ಏನಿದು ಪ್ರಕರಣ?: ಶಿಕಾರಿಪುರ ತಾಲೂಕು ತೊಗರ್ಸಿ ಗ್ರಾಮದ ಸುಮಾ ಮೃತ ದುರ್ದೈವಿ. ಮಗಳ ಸಾವಿಗೆ ಕಾರಣನಾದ ಅಪರಿಚಿತ ವ್ಯಕ್ತಿಯನ್ನ ಪತ್ತೆ ಮಾಡಿ ಶಿಕ್ಷಿಸುವಂತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ ಆಕೆಯ ತಂದೆ. ಬಿಎ ಪದವಿ ಮುಗಿಸಿದ ಸುಮಾ ಮನೆಯಲ್ಲೇ ಇದ್ದರು. ಆ್ಯಂಡ್ರಾಯ್ಡ್​ ಮೊಬೈಲ್​ ಬಳಸುತ್ತಿದ್ದ ಸುಮಾ, ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಏಪ್ರಿಲ್ 6ರಂದು ಇನ್‌ಸ್ಟಾಗ್ರಾಮ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಅರೆಬೆತ್ತಲೆ ಪೋಟೋವನ್ನು ನನ್ನ ಇನ್‌ಸ್ಟಾಗ್ರಾಮ್‌ಗೆ ಹಾಕು. ಇಲ್ಲವಾದರೆ ನಿನ್ನ ಫೋಟೋವನ್ನು ನಾನೇ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

    ಇದರಿಂದ ಭಯಗೊಂಡ ಸುಮಾ, ತನ್ನ ತಂದೆಯ ಗಮನಕ್ಕೆ ತಂದರು. ಮಗಳಿಗೆ ಧೈರ್ಯ ತುಂಬಿದ ತಂದೆ, ಕಿಡಿಗೇಡಿಗಳ ಬ್ಲ್ಯಾಕ್​ಮೇಲ್‌ಗೆ ಭಯ ಪಡಬೇಡ, ಅವರಿಗೆ ತಕ್ಕ ಪಾಠ ಕಲಿಸೋಣ ಎಂದು ಸಮಾಧಾನ ಮಾಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸೋಣ. ರೆಡಿಯಾಗಿ ಬಾ ಎಂದು ತಂದೆ ಹೇಳಿದಾಗ ರೆಡಿಯಾಗಿ ಬರುತ್ತೇನೆ ಎಂದು ರೂಮಿಗೆ ಹೋದ ಸುಮಾ ವಾಪಸ್​ ಹೊರಗೆ ಬಾರಲೇ ಇಲಿಲ್ಲ. ಮಗಳೇ, ಬಾರವ್ವ ಎಷ್ಟೊತ್ತು ರೆಡಿಯಾಗ್ತೀಯಾ? ಎನ್ನುತ್ತಾ ಕೋಣೆಗೆ ಹೋದ ತಂದೆಗೆ ಆಘಾತ ಕಾದಿತ್ತು. ಮಗಳು ಫ್ಯಾನಿಗೆ ನೇಣುಬಿಗಿದುಕೊಂಡು ಮೃತಪಟ್ಟಿದ್ದಳು. ತಕ್ಷಣ ನೆರೆಹೊರೆಯವರ ನೆರವಿನಿಂದ ಪುತ್ರಿಯನ್ನು ಶಿರಾಳಕೊಪ್ಪ ಆಸ್ಪತ್ರೆಗೆ ತಂದೆ ಕರೆದೊಯ್ದರಾದರೂ ಆಕೆ ಬದುಕಿಲ್ಲ ಎಂದು ವೈದ್ಯರು ಘೋಷಿಸಿದರು. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಮಗಳ ಸಾವಿಗೆ ಕಾರಣನಾದವನಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ ತಂದೆ, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳು ಹೇಳಿದ್ದ ಎಲ್ಲ ಮಾಹಿತಿಯನ್ನೂ ದೂರಿನಲ್ಲಿ ವಿವರಿಸಿದ್ದಾರೆ. ಸುಮಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕರೆ ಮಾಡಿ ಬ್ಲ್ಯಾಕ್​ಮೇಲ್ ಮಾಡಿದ ಕಿಡಿಗೇಡಿಯನ್ನು ಪತ್ತೆ ಮಾಡಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts