

ನವದೆಹಲಿ: ತಾಯಿಯಾದವರಿಗೆ ತಮ್ಮ ಮಗುವಿಗೆ ಎದೆಹಾಲುಣಿಸುವ ಕ್ಷಣವೂ ಜೀವನ ಪ್ರಯಾಣದಲ್ಲಿ ತುಂಬಾ ಭಾವನಾತ್ಮಕತೆಯನ್ನು ಹೊಂದಿರುತ್ತದೆ. ಈ ಕ್ಷಣವನ್ನು ಜೀವನ ಪೂರ್ತಿ ನೆನಪಿನಲ್ಲಿಡುವ ಸಲುವಾಗಿ ಎದೆಹಾಲಿನ ಮೂಲಕ ಅತ್ಯಮೂಲ್ಯ ಆಭರಣ ತಯಾರಿಸುವ ಟ್ರೆಂಡ್ ಸೃಷ್ಟಿಯಾಗಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಇದು ಚಾಲ್ತಿಯಲ್ಲಿದೆ.
ಅಲ್ಮ ಪರ್ಟಿಡಾ ಎಂಬುವರು ದಿ ನ್ಯೂಯಾರ್ಕ್ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಮೂಲ್ಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮಗಳು ಅಲೆಸ್ಸಾಗೆ ಸುಮಾರು 18 ತಿಂಗಳು ಎದು ಹಾಲುಣಿಸಿದ್ದ ಅಲ್ಮ, ಎದೆಹಾಲುಣಿಸಿದ ಪ್ರಯಾಣವನ್ನು ಬಹುಕಾಲ ನೆನಪಿನಲ್ಲಿಡುವ ಸಲುವಾಗಿ ವಿಶೇಷ ದಾರಿಯನ್ನು ಆಯ್ದುಕೊಂಡರು.
ಫೇಸ್ಬುಕ್ನಲ್ಲಿ ಹುಡುಕಾಡುವಾಗ ಅಲ್ಮ ಅವರು ಒಂದು ವಿಶೇಷ ಪೋಸ್ಟ್ ಅನ್ನು ಗಮನಿಸುತ್ತಾರೆ. ಅದರಲ್ಲಿ ಎದೆ ಹಾಲಿನಲ್ಲಿ ಆಭರಣ ಮಾಡಿಕೊಡುವುದಾಗಿ ಬರೆದಿಲಾಗಿರುತ್ತದೆ. ಬಳಿಕ ಕೀಪ್ಸೇಕ್ಸ್ ಬೈ ಗ್ರೇಸ್ ಎಂಬ ಕಂಪನಿಯನ್ನು ಸಂಪರ್ಕಿಸಿ ಸುಮಾರು 10 ಮಿಲಿಲೀಟರ್ನಷ್ಟು ಎದೆಹಾಲನ್ನು ಕಳುಹಿಸಿಕೊಡುತ್ತಾರೆ. ಬಳಿಕ ಹಾಲಿನ ಬಣ್ಣದ ಹೃದಯ ಮಾದರಿಯ ಆಭರಣವೊಂದನ್ನು ಸ್ವೀಕರಿಸುತ್ತಾರೆ. ಇದು ಕೊನೆಯ ಹನಿ ಮತ್ತು ನೀವು ಪ್ರಯಾಣವನ್ನು ನೆನಪಿಟ್ಟುಕೊಳ್ಳಬೇಕಾದ ಕೊನೆಯ ವಿಷಯವಿದು ಎಂದು ಅಲ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ಕೀಪ್ಸೇಕ್ಸ್ ಬೈ ಗ್ರೇಸ್ ಮಾಲೀಕ ಸಾರಾ ಕ್ಯಾಸ್ಟಿಲ್ಲೊ ಮಾತನಾಡಿ ಈ ರೀತಿಯ ಬಹಳಷ್ಟು ಆರ್ಡರ್‌ಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ಒಂದ ಆಭರಣಕ್ಕೆ 60 ರಿಂದ 150 ಡಾಲರ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಭಾರತದಲ್ಲೂ ಈ ಟ್ರೆಂಡ್ ಚಾಲ್ತಿಯಲ್ಲಿದೆ. ಚೆನ್ನೈ ಮೂಲದ ಕಲಾವಿದೆ ಪ್ರೀತಿ ಎಂಬಾಕೆ ಇದೇ ರೀತಿಯ ಆಭರಣಗಳನ್ನು ಮಾಡಿಕೊಡುತ್ತಿದ್ದಾರೆ. ಅಲ್ಲದೆ, ಇಯರಿಂಗ್ಸ್, ರಿಂಗ್ಸ್ ಸೇರಿದಂತೆ ಹಲವು ಆಭರಣಗಳನ್ನು ಮಾಡಿಕೊಡುತ್ತಾರೆ. ಅನೇಕರ ಫೇಸ್ಬುಕ್ನಲ್ಲಿ ಕೇಳಿಕೊಂಡ ಬಳಿಕ ಎದೆಹಾಲಿನಲ್ಲಿ ಆಭರಣ ಮಾಡಿಕೊಡಲು ಆರಂಭಿಸಿದ್ದಾರೆ. ಒಂದು ಆಭರಣಕ್ಕೆ 1000 ದಿಂದ 4000 ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮ ಡಿಸೈನ್ ಮೇಲೂ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.
ತಾಯಿಯ ಎದೆ ಹಾಲು ಮಾತ್ರವಲ್ಲ, ಮಗುವಿನ ಮೊದಲ ಹಲ್ಲು, ಕೂದಲು ಮತ್ತು ಹೊಕ್ಕುಳಬಳ್ಳಿಯ ತುಂಡುಗಳೊಂದಿಗೆ ಮಾಡಿದ ಆಭರಣಗಳನ್ನು ಮಾಡಿಕೊಡುವಂತೆ ಆರ್ಡರ್ ಬರುತ್ತಿದೆ ಎಂದು ಪ್ರೀತಿ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)