ಕರ್ತವ್ಯ ಮರೆತು ಚಲಿಸುವ ಕಾರಿನಲ್ಲಿ ಕುಣಿದು ಕುಪ್ಪಳಿಸಿದ ಪೊಲೀಸ್​ ಸಿಬ್ಬಂದಿಗೆ ಬಿಗ್​ ಶಾಕ್..!​

Police
Published on

ಅಹಮದಬಾದ್​: ಪೊಲೀಸ್​ ಕೆಲಸವೆಂದರೆ ಅದಕ್ಕೊಂದು ಗತ್ತು ಗಾಂಭೀರ್ಯ ಇದೆ. ಅದರಲ್ಲೂ ಯೂನಿಫಾರ್ಮ್​ ಮೈಮೇಲೆ ಇದ್ದರೆ ಶ್ರದ್ಧೆ ಹಾಗೂ ಗಂಭೀರತೆಯಿಂದ ಕೆಲಸ ಮಾಡಬೇಕು. ಜನರ ಸಮಸ್ಯೆಯನ್ನು ಬಗೆಹರಿಸಿ, ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕರ್ತವ್ಯದ ಸಮಯದಲ್ಲಿ ಎಂಜಾಯ್​ ಮಾಡಲು ಅವಕಾಶವೇ ಇರುವುದಿಲ್ಲ. ಆದರೆ, ತಮ್ಮ ಕರ್ತವ್ಯ ಮರೆತು ಕೆಲಸದ ಸಮಯದಲ್ಲಿ ಪೊಲೀಸ್​ ಸಿಬ್ಬಂದಿ ಎಂಜಾಯ್​ ಮಾಡುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ವಿಡಿಯೋದಲ್ಲಿ ಏನಿದೆ?

ಚಲಿಸುತ್ತಿರುವ ಕಾರಿನಲ್ಲಿ ಕುಳಿತು ಕರ್ತವ್ಯದ ಸಮಯದಲ್ಲಿ ಯೂನಿಫಾರ್ಮ್​ನಲ್ಲಿಯೇ ನಾಲ್ವರು ಪೊಲೀಸ್​ ಸಿಬ್ಬಂದಿ ಫನ್​ ಮಾಡುತ್ತಿರುವುದು ವಿಡಿಯೋದಲ್ಲಿದೆ. ಕಾರಿನಲ್ಲಿ ಹಿಂದಿ ಹಾಡನ್ನು ಪ್ಲೇ ಮಾಡಿ, ಡಾನ್ಸ್​ ಮಾಡುತ್ತಾ ಕೂಗಾಡಿಕೊಂಡು ಸಿಬ್ಬಂದಿ ತೆರಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆ ಗುಜರಾತಿನ ಕಚ್​ ಜಿಲ್ಲೆಯಲ್ಲಿ ನಡೆದಿದೆ. ಗಾಂಧಿಧಾಮ್​ ಪೊಲೀಸ್​ ಠಾಣಾ ಸಿಬ್ಬಂದಿಯ ಈ ವರ್ತನೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಮೂವರು ಕಾನ್ಸ್​ಟೇಬಲ್​ಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net