More

    ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೀರಾ ಜಾಸ್ಮಿನ್​: ಮೊದಲ ದಿನದ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಾ!

    ಕೊಚ್ಚಿ: ಮಲಯಾಳಂ ಬ್ಯೂಟಿ ಮೀರಾ ಜಾಸ್ಮಿನ್​ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಜಾಸ್ಮಿನ್​ ಕಾಲಾನಂತರದಲ್ಲಿ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಉಪಸ್ಥಿತಿ ಇರಲಿಲ್ಲ. ಜಾಸ್ಮಿನ್​ ಎಲ್ಲಿ ಹೋದರು ಎಂದು ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಜಾಸ್ಮಿನ್​ ಇದೀಗ ಮತ್ತೊಮ್ಮೆ ಎಲ್ಲರ ಎದುರು ಬಂದಿದ್ದಾರೆ.

    ಹೌದು, ಮೀರಾ ಜಾಸ್ಮಿನ್​ ನಿನ್ನೆ (ಜ.20) ಇನ್​ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ಇದುವರೆಗೂ ಜಾಲತಾಣದಿಂದ ಮತ್ತು ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಜಾಸ್ಮಿನ್​ ಇದೀಗ ದಿಢೀರ್​ ಇನ್​ಸ್ಟಾಗ್ರಾಂನಲ್ಲಿ ಪತ್ತೆಯಾಗಿರುವುದು ಅಭಿಮಾನಿಗಳಿಗೆ ತುಂಬಾ ಖುಷಿ ತರಿಸಿದೆ.

    ಇನ್​ಸ್ಟಾಗ್ರಾಂ ಖಾತೆ ತೆರೆದಿರುವ ಜಾಸ್ಮಿನ್​ ಇದುವರೆಗೂ ಎರಡು ಪೋಸ್ಟ್​ಗಳನ್ನು ಮಾಡಿದ್ದಾರೆ. ಒಂದು ಪೋಸ್ಟ್​ನಲ್ಲಿ ಸೀರೆಯುಟ್ಟಿರುವ ಫೋಟೋ ಅಪ್​ಲೋಡ್​ ಮಾಡಿದ್ದು, ನಾವು ಯಾವಾಗಲೂ ಪ್ರಾರಂಭವನ್ನು ಪೋಷಿಸೋಣ. ನಮ್ಮೆಲ್ಲರನ್ನೂ ಒಬ್ಬರಿಗೊಬ್ಬರು ಹತ್ತಿರವಾಗಿಸುವ ಈ ಹೆಜ್ಜೆಯನ್ನು ಇಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ವಿಡಿಯೋವನ್ನು ಪೋಸ್ಟ್​ ಮಾಡಿರುವ ಮೀರಾ ಜಾಸ್ಮಿನ್​, ನೀವು ನನಗೆ ನಿಮ್ಮ ಅಮೂಲ್ಯ ಸಮಯವನ್ನು ನೀಡಿದ್ದೀರಿ, ಇದು ಎಲ್ಲದಕ್ಕಿಂತ ಅತ್ಯುತ್ತಮ ಉಡುಗೊರೆ. ಸಂಪೂರ್ಣ ಕೃತಜ್ಞತೆ ಮತ್ತು ಅನಂತ ಪ್ರೀತಿ ನಿಮ್ಮ ಮೇಲಿದೆ. ಮುಂದಿನ ಈ ಸುಂದರ ಪಯಣ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ.

    ಅಚ್ಚರಿಯೆಂದರೆ, ಜಾಸ್ಮಿನ್​ ಇನ್​ಸ್ಟಾಗ್ರಾಂ ಖಾತೆ ತೆರೆದ ಮೊದಲ ದಿನವೇ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಜಾಸ್ಮಿನ್​ ಅವರು 132 ಮಂದಿಯನ್ನು ಹಿಂಬಾಲಿಸುತ್ತಿದ್ದಾರೆ. ಅವರ ಎರಡೂ ಪೋಸ್ಟ್​ಗಳಿಗೂ ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ಇದನ್ನು ನೋಡಿದರೆ ಜಾಸ್ಮಿನ್​ಗೆ ಇರುವ ಕ್ರೇಜ್​ ಇನ್ನು ಕಡಿಮೆಯಾಗಿಲ್ಲ ಎಂದು ತೋರುತ್ತದೆ. ಈ ಹಿಂದೊಮ್ಮೆ ಜಾಸ್ಮಿನ್​ ಅವರು ದಿಢೀರ್​ ಪ್ರತ್ಯಕ್ಷರಾಗಿದ್ದರು. ಆ ವೇಳೆ ಅವರು ತುಂಬಾ ದಪ್ಪವಾಗಿದ್ದರು. ಇದೀಗ ಸ್ಲಿಮ್​ ಆಗಿ ಕಾಣುತ್ತಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

    ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೀರಾ ಜಾಸ್ಮಿನ್​: ಮೊದಲ ದಿನದ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಾ!

    ಅಂದಹಾಗೆ ಜಾಸ್ಮಿನ್​ ಅವರು 2014ರಲ್ಲಿ ಅನಿಲ್​ ಜಾನ್​ ಟಿಟನ್​ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಪತಿ ದುಬೈನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲೇ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡರು. ಮದುವೆಯಾಗಿದ್ದರೂ ಮಾನಸಿಕ ಸಮಸ್ಯೆಯಿಂದ ಜಾಸ್ಮಿನ್​ ತಮ್ಮ ಪತಿಯಿಂದ ಬೇರೆಯಾಗಿದ್ದಾರೆ. ಮತ್ತೆ ಸಿನಿಮಾ ಕಡೆ ಒಲವು ತೋರಿಸಿರುವ ಜಾಸ್ಮಿನ್​ ಇತ್ತೀಚೆಗಷ್ಟೇ ಮಲಯಾಳಂ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಆಫರ್​ಗಳು ಬಂದರೆ ಎಲ್ಲ ಭಾಷೆಯಲ್ಲೂ ನಟಿಸುವುದಾಗಿ ಹೇಳಿಕೊಂಡಿದ್ದಾರೆ.

    ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೀರಾ ಜಾಸ್ಮಿನ್​: ಮೊದಲ ದಿನದ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಾ!
    ಮೀರಾ ಜಾಸ್ಮಿನ್​ ಮತ್ತು ಪತಿ

    ಜಾಸ್ಮಿನ್​ ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ದಿವಂಗತ ನಟ ಪುನೀತ್​ ಜತೆ ಮೌರ್ಯ ಮತ್ತು ಅರಸು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಶಿವಣ್ಣನ ಜತೆ ದೇವರ ಕೊಟ್ಟ ತಂಗಿ ಚಿತ್ರ ಮತ್ತು ರವಿಚಂದ್ರನ್​ ಜತೆ ಹೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನದಲ್ಲೂ ಜಾಸ್ಮಿನ್​ ಮನೆ ಮಾಡಿದ್ದು, ಅವರ ಮುಂದಿನ ಪಯಣ ಸುಗಮವಾಗಿರಲಿ. (ಏಜೆನ್ಸೀಸ್​)

    ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಹೊಂದುವ ಹಕ್ಕಿದೆ ಎಂದು ಹೇಳುವಂತಿಲ್ಲ: ದೆಹಲಿ ಹೈಕೋರ್ಟ್​

    ಟೀಮ್ ಇಂಡಿಯಾ ನಾಯಕತ್ವ ಎಂಬ ಮುಳ್ಳಿನ ಸಿಂಹಾಸನ..

    ಗೋರಖಪುರ ಹಿಂದಿನ ಲೆಕ್ಕಾಚಾರ; ಬ್ರಾಹ್ಮಣ, ಠಾಕೂರ್ ಮತಗಳ ಮೇಲೆ ಬಿಜೆಪಿ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts