ಪ್ರಸ್ತುತ ಸನ್ನಿವೇಶದಲ್ಲಿ ಲಸಿಕೆಯು ನಿಷ್ಪರಿಣಾಮಕಾರಿ ಆಗುವ ಸಾಧ್ಯತೆ ಇದೆ: ಡಾ. ವಿ.ಕೆ. ಪೌಲ್​

VK Poul
Published on

ನವದೆಹಲಿ: ಪ್ರಸ್ತುತ ದೇಶದಲ್ಲಿ ಎದುರಾಗುತ್ತಿರುವ ಸನ್ನಿವೇಶದಲ್ಲಿ ನಮ್ಮ ಕರೊನಾ ಲಸಿಕೆಯು ನಿಷ್ಪರಿಣಾಮಕಾರಿ ಆಗುವ ಸಾಧ್ಯತೆ ಇದೆ ಎಂದು ನೀತಿ ಆಯೋದ ಸದಸ್ಯ ಡಾ. ವಿ.ಕೆ. ಪೌಲ್​ ಬುಧವಾರ ತಿಳಿಸಿದ್ದಾರೆ.

ರಾಷ್ಟ್ರದಲ್ಲಿ ಕರೊನಾ ರೂಪಾಂತರಿ ಒಮಿಕ್ರಾನ್​ ಭೀತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವಿ.ಕೆ. ಪೌಲ್​ ಈ ಮಾತುಗಳನ್ನಾಡಿದ್ದಾರೆ. ಇಂದು ರೂಪಾಂತರಿಗಳನ್ನು ಗುರಿಯಾಗಿರಿಸಿಕೊಂಡು ಲಸಿಕೆ ರಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಔಷಧ ಅಭಿವೃದ್ಧಿಗೆ ಹೆಚ್ಚು ಸಂಘಟಿತ ವಿಧಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇಡೀ ಜಗತ್ತು ಲಸಿಕೀಕರಣ ಆಗಬೇಕೆಂಬುದು ಪ್ರಸ್ತುತ ಆದ್ಯತೆ ಆಗಬೇಕು. ಲಸಿಕೆಯ ಹಿಂದೆ ಯಾರು ಉಳಿಯಬಾರದು. ಅಲ್ಲದೆ, ಈ ಸಾಂಕ್ರಮಿಕವನ್ನು ನಿರ್ಮೂಲನೆ ಮಾಡಲು ವಿಜ್ಞಾನದ ಮೇಲೆ ಹೆಚ್ಚು ಬಂಡವಾಳ ಹೂಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net