ವಿಮಾನ ನಿಲ್ದಾಣದಲ್ಲಿ ಬೆತ್ತಲಾದ ಮಾಡೆಲ್​ಗೆ 25 ಕೋಟಿ ರೂ. ದಂಡ, 18 ವರ್ಷ ಜೈಲು ಶಿಕ್ಷೆ..!

model
Published on

ಜಕಾರ್ತ: ಕೆಲವೊಂದು ದೇಶಗಳಲ್ಲಿ ಪೋರ್ನ್​ ವಿಡಿಯೋಗಳನ್ನು ತೆಗೆಯುವುದು ಮತ್ತು ನೋಡುವುದು ಅಪರಾಧ. ಅಂತಹ ಕಠಿಣ ನಿರ್ಬಂಧಗಳಿರುವ ದೇಶದ ಮಾಡೆಲ್​ ಒಬ್ಬರು ಪೋರ್ನ್​ ಫೋಟೋಶೂಟ್​ ಮಾಡಿದ ಆರೋಪದ ಮೇಲೆ 18 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಮಾಡೆಲ್​ ಹೆಸರು ಸಿಸ್ಕೈ. ಇಂಡೋನೇಷ್ಯಾದ ಜಾವಾ ವಿಮಾನ ನಿಲ್ದಾಣದ ಪಾರ್ಕಿಂಗ್​ ಪ್ರದೇಶದಲ್ಲಿ ಫೋರ್ನೊಗ್ರಫಿಕ್​ ಫೋಟೋಶೂಟ್​ ಮಾಡಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋ ಪೊಸ್ಟ್​ ಮಾಡಿದ ಕೇವಲ ಒಂದು ನಿಮಿಷದಲ್ಲೇ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ಮಾಡೆಲ್​ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಮಾಡೆಲ್​ ಅನ್ನು ಇಂಡೋನೇಷ್ಯಾದ ಬಂಡುಂಗ್​ ನಗರದಲ್ಲಿ ಬಂಧಿಸಲಾಗಿದೆ. ಮಾಡೆಲ್​ ಅಶ್ಲೀಲ ಫೋಟೋಶೂಟ್​ ವಿಮಾನ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧಾರವಾಗಿಟ್ಟುಕೊಂಡು ಮಾಡೆಲ್​ ಅನ್ನು ಬಂಧಿಸಲಾಗಿದೆ.

ಸ್ಥಳೀಯ ಕಾನೂನಿನ ಪ್ರಕಾರ ಇಂತಹ ಕೃತ್ಯಗಳನ್ನು ಭಾಗಿಯಾಗುವವರಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದೀಗ ಮಾಡೆಲ್​ಗೂ ಅದೇ ಶಿಕ್ಷೆಯನ್ನು ವಿಧಿಸಲಾಗಿದ್ದು, ಇರಲಾರದೇ ಇರುವೆ ಬಿಟ್ಟುಕೊಂಡಂತಾಗಿದೆ ಮಾಡೆಲ್​ ಕತೆ. ಅಲ್ಲದೆ, 25 ಕೋಟಿ ರೂ. ದಂಡವನ್ನು ಕಟ್ಟಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net