More

    ಹುತಾತ್ಮ ಯೋಧ ಸಾಯಿತೇಜ್​ ಕುಟುಂಬಕ್ಕೆ ಆಂಧ್ರ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಘೋಷಣೆ

    ವಿಜಯವಾಡ: ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್​ ನಾಯ್ಕ​ ಸಾಯಿತೇಜ್ ಕೂಡ ಒಬ್ಬರು. ಇವರ ನಿಧನ ಭಾರತೀಯ ಸೇನೆಗೆ ತುಂಬಲಾರದ ನಷ್ಟವಾಗಿದ್ದು, ಅತಿ ಕಿರಿಯ ವಯಸ್ಸಲ್ಲೇ ಹುತಾತ್ಮರಾದ ಸಾಯಿತೇಜ ಅವರ ಕುಟುಂಬಕ್ಕೆ ಆಂಧ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

    ಆಂಧ್ರದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪೆದ್ದಿ ರೆಡ್ಡಿ ರಾಮಚಂದ್ರ ರೆಡ್ಡಿ ಶನಿವಾರ ಸಾಯಿತೇಜ್ ಕುಟುಂಬವನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಸರ್ಕಾರದ ಪರವಾಗಿ 50 ಲಕ್ಷ ರೂ. ಪರಿಹಾರ ಚೆಕ್​ ಅನ್ನು ಸಾಯಿತೇಜ್ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.

    ಡಿ. 8ರ ಬುಧವಾರದಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರಿನ ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್ ಜತೆ ತೆರಳುವಾಗ ಹೆಲಿಕಾಪ್ಟರ್​ ಪತನವಾಗಿ ಮೃತಪಟ್ಟ 13 ಮಂದಿಯಲ್ಲಿ ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​ ಕೂಡ ಒಬ್ಬರು. ಡಿಎನ್​ಎ ಪರೀಕ್ಷೆ ಮೂಲಕ ಶನಿವಾರ ಬೆಳಗ್ಗೆ ಸಾಯಿತೇಜ್​ ಅವರ ಮೃತದೇಹವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

    ಮಿಲಿಟರಿ ಶಿಷ್ಟಾಚಾರದ ಬಳಿಕ ಹುತಾತ್ಮ ಸಾಯಿತೇಜ್​ ಅವರ ಪಾರ್ಥೀವ ಶರೀರವನ್ನು ಶನಿವಾರ ಅವರ ತವರಿಗೆ ಸ್ಥಳಾಂತರಿಸಲಾಗಿದೆ. 27 ವರ್ಷದ ಸಾಯಿತೇಜ್​ ಅವರು ಆಂಧ್ರದ ಚಿತ್ತೂರು ಜಿಲ್ಲೆಯ ರೆಗಡಿಪಲ್ಲೇ ಗ್ರಾಮದವರು.

    ಡಿ. 8ರಂದು ಬಿಪಿನ್​ ರಾವತ್​ ಜತೆ ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ

    ಸಂಕ್ರಾಂತಿಗೆ ಬರುವೆ ಎಂದಿದ್ದರು! ಏನೂ ಅರಿಯದ ನನ್ನ ಪುಟ್ಟ ಕಂದಮ್ಮಗಳಿಗೆ ಏನೆಂದು ಹೇಳಲಿ… ಯುವ ಯೋಧನ ಪತ್ನಿಯ ಕಣ್ಣೀರು

    ಕೃಷ್ಣಾ ನದಿ ನೀರಲ್ಲಿ ಮುಳುಗಿ ಗುರೂಜಿ ಮತ್ತು 5 ವಿದ್ಯಾರ್ಥಿಗಳು ಸಾವು! ಓರ್ವ ವಿದ್ಯಾರ್ಥಿ ಸಾವನ್ನೇ ಜಯಿಸಿ ಬಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts