More

    ಪೆನ್‌ಡ್ರೈವ್ ಸೋರಿಕೆಗೆ ಅಮಿತ್ ಷಾ ಆಶೀರ್ವಾದ: ಸಚಿವ ಪ್ರಿಯಾಂಕ್ ಖರ್ಗೆ ಆರೋಪ

    ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಹೊಂದಿರುವ ಪೆನ್ ಡ್ರೈವ್ ಬಹಿರಂಗವಾಗುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಶೀರ್ವಾದ ಇರಬಹುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

    ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಅಶ್ಲೀಲ ವಿಡಿಯೋವುಳ್ಳ ಪೆನ್‌ಡ್ರೈವ್ ಸೋರಿಕೆಯಲ್ಲಿ ನಾಲ್ವರು ಸಚಿವರ ಕೈವಾಡವಿದೆ ಎಂಬ ವಕೀಲ ದೇವರಾಜೇಗೌಡ ಆರೋಪಗಳಿಗೆ ಖಾರವಾಗಿ ಪ್ರತ್ಯುತ್ತರಿಸಿದರು.
    ದೇವರಾಜೇಗೌಡ ಈ ಹಿಂದೆ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದರು. ಅಮಿತ್ ಷಾ ಆಶೀರ್ವಾದದಿಂದಲೇ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹಿಂದೆ ಹೇಳಿಕೊಂಡಿದ್ದರು. ಪೆನ್ ಡ್ರೈವ್ ಬಯಲು ಮಾಡುವುದಕ್ಕೂ ಅಮಿತ್ ಷಾ ಆಶೀರ್ವಾದ ಇದ್ದಿರಬಹುದು ಎಂದು ತಿರುಗೇಟು ನೀಡಿದರು.

    ಪೆನ್‌ಡ್ರೈವ್ ಬಹಿರಂಗಪಡಿಸಲು 100 ಕೋಟಿ ರೂ. ಆಮಿಷವೊಡ್ಡಿ, ಐದು ಕೋಟಿ ರೂ. ಮುಂಗಡ ನೀಡಲಾಗಿತ್ತು ಎಂದು ದೇವರಾಜೇಗೌಡ ಆಪಾದಿಸಿದ್ದಾರೆ. ನಿಜವೇ ಆಗಿದ್ದರೆ ನೇರವಾಗಿ ಅಮಿತ್ ಷಾ ಅವರಿಗೆ ಮಾಹಿತಿ ನೀಡಿ ಆದಾಯ ತೆರಿಗೆ, ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕಿತ್ತು ಇಲ್ಲವೇ ವಕೀಲರಾಗಿರುವ ಅವರು ನ್ಯಾಯಾಧೀಶರ ಮುಂದಾದರೂ ಮಾಹಿತಿ ನೀಡಬೇಕಾಗಿತ್ತು ಎಂದರು.

    ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಮುಚ್ಚಿಹಾಕಲು ಬಿಜೆಪಿ, ಜೆಡಿಎಸ್‌ನವರು ಷಡ್ಯಂತ್ರ ಮಾಡುತ್ತಿದ್ದಾರೆ. ದೌರ್ಜನ್ಯ, ವಿಡಿಯೋ ರೆಕಾರ್ಡಿಂಗ್ ಬದಲು ವಿಡಿಯೋ ಸೋರಿಕೆ ಆಗಿದ್ದೇ ತಪ್ಪು ಎಂಬಂತೆ ದೊಡ್ಡದಾಗಿ ಬಿಂಬಿಸಲು ಹವಣಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದೂಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts