More

  ಶಿಕ್ಷಣ ಜೀವನದ ಅಮೂಲ್ಯ ಆಸ್ತಿ

  ಶೃಂಗೇರಿ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದವರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವಿರುತ್ತದೆ ಎಂದು ಕಲ್ಕಟ್ಟೆ ರಾಘವೇಂದ್ರ ಬೃಂದಾವನ ಸೇವಾ ಸಮಿತಿ ಪದಾಧಿಕಾರಿ ನಾಗೇಶ್ ಕಾಮತ್ ಹೇಳಿದರು.
  ಮೆಣಸೆ ಗ್ರಾಪಂ ಕಲ್ಕಟ್ಟೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.
  ಶಿಕ್ಷಣ ಜೀವನದ ಅಮೂಲ್ಯ ಆಸ್ತಿ. ಪರಿಶ್ರಮದಿಂದ ಶೈಕ್ಷಣಿಕ ಸಾಧನೆಗೈದರೆ ಉತ್ತಮ ಉದ್ಯೋಗ ಪಡೆದು ಆರ್ಥಿಕ ಸಬಲತೆ ಸಾಧಿಸಬಹುದು. ಹೆಚ್ಚು ಅಂಕ ಪಡೆದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.
  ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಮಾತನಾಡಿ, ಯಾವುದೇ ಉದ್ಯೋಗ ಮಾಡಬೇಕಾದರೂ ಅದರಲ್ಲಿ ನೈಪುಣ್ಯತೆ ಹೊಂದಿರಬೇಕು. ಶಿಕ್ಷಣದೊಂದಿಗೆ ಕೌಶಲ ಹೊಂದಿದಾಗ ಅದು ಹೆಚ್ಚು ಉಪಯುಕ್ತವಾಗುತ್ತದೆ ಎಂದು ಹೇಳಿದರು. ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಜೆಸಿಬಿಎಂ ಕಾಲೇಜಿನ ಕೆ.ಜಿ.ಇಂಚರಾ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಮೈಥಿಲಿ ಅವರನ್ನು ಪುರಸ್ಕರಿಸಲಾಯಿತು.
  ಕಾರ್ಯದರ್ಶಿ ಭೋಜ ಕುಲಾಲ್, ಖಜಾಂಚಿ ಚಂದ್ರಾನಾಯ್ಕಾ, ಉಳುವೆ ಗಿರೀಶ್, ಅರ್ಚಕ ಸುಬ್ರಹ್ಮಣ್ಯ ಮರಾಠೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts