23 ವರ್ಷಕ್ಕೆ ಈಕೆ ಮಾಡ್ತಿರೋ ಕೆಟ್ಟ ಕೆಲ್ಸ ಕೇಳಿದ್ರೆ ದಂಗಾಗ್ತೀರಾ! ಖತರ್ನಾಕ್​​ ಲೇಡಿಯ ಭಯಾನಕ ಮುಖವಿದು

Surath Lady Don
Published on

ಸೂರತ್ (ಗುಜರಾತ್​)​: ನೋಡಲು ಸಾಮಾನ್ಯ ಯುವತಿಯಂತೆ ಕಾಣುವ 23 ವರ್ಷದ ಅಸ್ಮಿತಾ ಬಾ ಗೊಹಿಲ್​ ಅಲಿಯಾಸ್​ ದಿಕು ಸಾಮಾಜಿಕ ಜಾಲತಾಣದಲ್ಲಿಯೂ ಪರಿಚಿತರಾಗಿದ್ದಾರೆ. ಆದರೆ, ಈಕೆಯ ಹಿನ್ನೆಲೆ ಮಾತ್ರ ನಿಜಕ್ಕೂ ಆತಂಕಕಾರಿ. "ಸೂರತ್​ನ ಲೇಡಿ ಡಾನ್​" ಎಂದೇ ಕುಖ್ಯಾತಿ ಆಗಿರುವ ದಿಕು, ಅಪರಾಧ ಚಟುವಟಿಕೆ ಹಿನ್ನೆಲೆ ಹೊಂದಿದ್ದಾಳೆ.

ದಿಕು, ಓದುವ ವಯಸ್ಸಲ್ಲೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಸಾರ್ವಜನಿಕವಾಗಿ ಜನರನ್ನು ಬೆದರಿಸುವ ಮೂಲಕ ಅನೇಕ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರೀಯಳಾಗಿರುವ ದಿಕು, ಫ್ಯಾನ್ಸಿ ಬೈಕ್​ ಮತ್ತು ಕಾರುಗಳು ಹಾಗೂ ಖಡ್ಗ, ಬ್ಲೇಡ್ಸ್​ ಮತ್ತು ಗನ್​ಗಳನ್ನು ಹಿಡಿದಿರುವ ಫೋಟೋಗಳು ಆಗಾಗ ವೈರಲ್​ ಆಗುತ್ತಿರುತ್ತವೆ.

ಅನೇಕ ಬಾರಿ ಜನರ ಮೇಲೆ ಚಾಕುವಿನಿಂದ ದಿಢೀರ್​ ದಾಳಿ ಮಾಡಿರುವ ಕುಖ್ಯಾತಿಯನ್ನು ದಿಕು ಹೊಂದಿದ್ದಾಳೆ. ಐವರು ಸಹೋದರಿಯನ್ನು ಹೊಂದಿದ್ದು, ಈಕೆಯೇ ಕೊನೆಯವಳು. ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾಳೆ. ಈಕೆಯ ಅಪರಾಧ ಚಟುವಟಿಕೆಯ ಪಾಲುದಾರ ಸಂಜಯ್​ ಭುವಾ ಕೂಡ ಎರಡು ಕೊಲೆ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ಆರೋಪಿ.

ದಿಕು ಅನೇಕ ಬಾರಿ ಸುದ್ದಿಯಾಗಿದ್ದಾಳೆ. ಒಮ್ಮೆ ಖಡ್ಗ ಹಿದಿದು ಹಣಕ್ಕಾಗಿ ಸಾರ್ವಜನಿಕವಾಗಿ ಜನರನ್ನು ಬೆದರಿಸುವ ಮೂಲಕ ವೈರಲ್​ ಆಗಿದ್ದಳು. ಸೂರತ್​ನ ವರಚ್ಛ ಏರಿಯಾದ ಅಂಗಡಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ವಿಡಿಯೋ ಇತ್ತೀಚೆಗಷ್ಟೇ ವೈರಲ್​ ಆಗಿತ್ತು. ಬೈಕ್​ ಮೇಲೆ ಬಂದು ಖಡ್ಗ ತೆಗೆದು ಅಂಗಡಿ ಮಾಲೀಕರನ್ನು ಹೆದರಿಸಿ ಹಣ ವಸೂಲಿ ಮಾಡಿದ್ದಳು. ಈ ಸಂಬಂಧ ದೂರು ದಾಖಲಾದ ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದರು. ಈ ರೀತಿಯ ಪ್ರಕರಣ ಇದೇ ಮೊದಲೇನಲ್ಲ.

2018ರ ಮಾರ್ಚ್​ ತಿಂಗಳಲ್ಲೂ ವಿಡಿಯೋ ಒಂದು ವೈರಲ್​ ಆಗಿತ್ತು. ಕೈಯಲ್ಲಿ ಕುಡಗೋಲು ತರಹದ ಆಯುಧವನ್ನು ಹಿಡಿದು ಪುರುಷರ ಗುಂಪಿನ ಮೇಲೆ ನಿಂದನೆಗಳ ಸುರಿಮಳೆಗೈಯುತ್ತಿದ್ದರು. ಈ ವೇಳೆ ಆಕೆ ಸಂಜಯ್ ಗೊಹಿಲ್ ಎಂಬ ಸ್ನೇಹಿತನೊಂದಿಗೆ ಇದ್ದಳು, ಅವನ ಕೈಯಲ್ಲೂ ಸಹ ಚಾಕು ಇತ್ತು. ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಪೊಲೀಸ್​ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ ಲೇಡಿ ಡಾನ್​ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಈಗಲೂ ತನ್ನ ಕ್ರಿಮಿನಲ್​ ಚಟುವಟಿಕೆ ಮುಂದುವರಿಸಿರುವ ದಿಕುವಿನ ಮೇಲೆ ಸೂರತ್​ ಪೊಲೀಸರ ಕಣ್ಣು ಬಿದ್ದಿದೆ. ಆದರೂ ತನ್ನ ಕೃತ್ಯವನ್ನು ದಿಕು ನಿಲ್ಲಿಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net