ದಿಢೀರ್​ ಎದುರಾಗಿ ಬೈಕ್​ಗೆ ಡಿಕ್ಕಿ ಹೊಡೆದ ಕಾಡು ಹಂದಿ: ಯುವಕನ ದುರ್ಮರಣ

Wild Boar
Published on

ಕೊಯಿಕ್ಕೋಡ್​: ಕಾಡು ಹಂದಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೇರಳದ ಥೊಂಡಾಯಾಡ್​ ಬೈಪಾಸ್​ನಲ್ಲಿ ಗುರುವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಸಿದ್ದಿಖ್​ (33) ಎಂದು ಗುರುತಿಸಲಾಗಿದೆ. ಈ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಬೈಕ್​ನಲ್ಲಿ ಹೋಗುವಾಗ ದಿಢೀರನೇ ಎದುರಾದ ಕಾಡು ಹಂದಿ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಯಿತು.

ಇತ್ತ ಡಿಕ್ಕಿಯ ರಭಸಕ್ಕೆ ಬೈಕ್​ನಿಂದ ಕೆಳಗೆ ಬಿದ್ದ ಸಿದ್ದಿಖ್​ ತಲೆಗೆ ಭಾರೀ ಪೆಟ್ಟಾಗಿತ್ತು. ತಕ್ಷಣ ಆತನನ್ನು ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಥೊಂಡಾಯಾಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net