ಚಂದನ್​ ಶೆಟ್ಟಿ ಮರ್ಯಾದೆಯಾದ್ರೂ ಉಳಿಸು... ಪ್ರ್ಯಾಂಕ್​​ ವಿಡಿಯೋ ಹರಿಬಿಟ್ಟ ನಿವೇದಿತಾಗೆ ನೆಟ್ಟಿಗರ ಪಾಠ!

Nivedita
Published on

ಬೆಂಗಳೂರು: ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿನ ಪರಿಚಯ ಪ್ರೀತಿಗೆ ತಿರುಗಿ, ಒಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ರ್ಯಾಪರ್​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ತಾರಾದಂಪತಿ ಎನಿಸಿಕೊಂಡಿದ್ದು, ಯಶಸ್ವಿ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಸಖತ್​ ಆಕ್ಟೀವ್​ ಆಗಿರುತ್ತಾರೆ.

ಇತ್ತೀಚೆಗೆ ನಿವೇದಿತಾ ಅವರು ಪತಿ ಚಂದನ್​ಗೆ ಪ್ರ್ಯಾಂಕ್​ ಮಾಡಿದ ವಿಡಿಯೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. ಅದರ ಬಗ್ಗೆ "ಎಂದೂ ಹಳೆಯದಾಗದ ಪ್ರ್ಯಾಂಕ್​" ಎಂಬ ಅಡಿಬರಹ ನೀಡಿದ್ದರು.

ವಿಡಿಯೋದಲ್ಲಿ ಏನಿದೆ?: ನಿವೇದಿತಾ ಕ್ಯಾಮೆರಾ ಮುಂದೆ ನಿಂತು ಟವಲ್ ಕಿತ್ತೆಸೆಯುತ್ತರೆ. ಈ ವೇಳೆ ಆಕೆಯ ಹಿಂದೆಯೇ ಇದ್ದ ಪತಿ ಚಂದನ್​ ಗಾಬರಿಯಿಂದ ಟವಲ್​ ಅನ್ನು ಹಿಡಿಕೊಳ್ಳಲು ಯತ್ನಿಸುತ್ತಾರೆ. ಆದರೆ, ನಿವೇದಿತಾ ಶಾರ್ಟ್​ ಧರಿಸಿರುವುದನ್ನು ನೋಡಿ ಚಂದನ್​ ನಿಟ್ಟುಸಿರು ಬಿಡುತ್ತಾರೆ. ಇದಿಷ್ಟು ನಿವೇದಿತಾ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿದ್ದು, ಸಾಕಷ್ಟು ವೈರಲ್​ ಕೂಡ ಆಗಿದೆ.

ಜನರ ಟೀಕೆಗೆ ಗುರಿಯಾದ ವಿಡಿಯೋ

ನಿವೇದಿತಾ ಮಾಡಿದ ಪ್ರ್ಯಾಂಕ್​ ವಿಡಿಯೋ ಜನರಿಗೆ ಇಷ್ಟವಾಗುವ ಬದಲು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಇನ್​ಸ್ಟಾಗ್ರಾಂನಲ್ಲಿ ನಿವೇದಿತಾರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಸ್ವಲ್ಪವೂ ಶಿಸ್ತು ಇಲ್ಲ. ಈ ರೀತಿ ಹುಡುಗಾಟಿಕೆ ಆಡೋದನ್ನು ಬಿಟ್ಟು ಸ್ವಲ್ಪ ಸಮಾಜದ ಬಗ್ಗೆ ತಿಳಿದುಕೋ, ಕೇವಲ ಫ್ಯಾಶನ್​ನ್ನೇ ಜೀವನವಲ್ಲ ಎಂದು ನೆಟ್ಟಿಗರೊಬ್ಬರು ಜರಿದಿದ್ದಾರೆ.

ನಿಮ್ಮ ಮಾನ ಮರ್ಯಾದೆ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಾ... ನಿಮಗಾದ್ರೂ ಮಾನ ಮರ್ಯಾದೆ ಇಲ್ಲ. ಪಾಪ ಚಂದನ್​ ಶೆಟ್ಟಿಯವರ ಮರ್ಯಾದೆ ಉಳಿಸಿ​... ಜೀವನದಲ್ಲಿ ಸ್ವಲ್ಪ ಗಂಭೀರತೆ ಇರಲಿ ಎಂದೆಲ್ಲಾ ನೆಟ್ಟಿಗರು ನಿವೇದಿತಾರನ್ನು ಟೀಕಿಸುತ್ತಿದ್ದಾರೆ. ಇನ್ನು ಕೆಲ ನೆಟ್ಟಿಗರು ತಾರಾದಂಪತಿಯ ಬೆನ್ನಿಗೆ ನಿಂತಿದ್ದಾರೆ. ದಂಪತಿಯ ಅನ್ಯೋನ್ಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 85 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net