

ಮದನಪಲ್ಲಿ: ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ಮನೆಯವರಿಂದ ಬೆದರಿಕೆ ಇದೆ ಎಂದು ಆರೋಪಿಸಿ, ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.
ಮದನಪಲ್ಲಿ ಪಟ್ಟಣದ ಕಿರಣ್ (23) ಮತ್ತು ಮದನಪಲ್ಲಿ ಗ್ರಾಮೀಣ ಭಾಗದ ಕುಸುಮಾ (22) ಇಬ್ಬರು ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ಎರಡು ಕುಟುಂಬಗಳಿಗೆ ತಿಳಿದಿತ್ತು. ಆದರೆ, ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೂ, ಸೋಮವಾರ ಮನೆ ಬಿಟ್ಟು ಹೋದ ಪ್ರೇಮಿಗಳು ಮದುವೆ ಆಗಿದ್ದಾರೆ.
ಪಾಲಕರ ವಿರೋಧದ ನಡುವೆಯೂ ಇಬ್ಬರು ಮದುವೆ ಆಗಿದ್ದು, ಇದೀಗ ತಮಗೆ ಮನೆಯವರಿಗೆ ಬೆದರಿಕೆ ಇದೆ ಎಂದು ನವದಂಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ. ಆದರೆ, ಎಸ್ಪಿ ಕಚೇರಿಯ ಸಿಬ್ಬಂದಿ ಡಿಎಸ್ಪಿ ಕಚೇರಿಗೆ ಹೋಗುವಂತೆ ಸಲಹೆ ನೀಡಿದ್ದಾರೆಂದು ಪ್ರೇಮಿಗಳು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)