VIDEO| ಮಳೆಯನ್ನು ಸಂಭ್ರಮಿಸಿದ ಗಿರ್ ಕಾಡಿನ ಸಿಂಹದ ಮರಿಗಳು

Gir Forest
Published on

ಅಹಮದಾಬಾದ್​: ಗುಜರಾತ್​ನಲ್ಲಿ ಮುಂಗಾರು ಶುರುವಾಗಿದ್ದು, ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗಷ್ಟೇ ಅಲ್ಲ ಪ್ರಾಣಿಗಳಿಗೂ ವರುಣನ ಆಗಮನ ಖುಷಿ ತಂದಿದೆ.

ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹಿಣಿಗಳು ಮತ್ತು ಸಿಂಹದ ಮರಿಗಳು ಮಳೆಗೆ ಆನಂದಿಸುತ್ತಿರುವ ವಿಡಿಯೋ ಈಗ ಕೂ ನಲ್ಲಿ ವೈರಲ್ ಆಗಿದೆ.

'ಮಳೆಯ ತಾಜಾತನವು ಗಿರ್ ಕಾಡಿನಲ್ಲಿ ರಮಣೀಯ ವಾತಾವರಣವನ್ನು ಉಂಟುಮಾಡಿತು. ಈ ಸಿಂಹಿಣಿಗಳು ಮತ್ತು ಪುಟ್ಟ ಮರಿಗಳು ಮಳೆಯನ್ನು ಹೇಗೆ ಆನಂದಿಸುತ್ತಿವೆ ಎಂಬುದನ್ನು ವೀಕ್ಷಿಸಿ' ಎಂಬ ಅಡಿಬರಹದೊಂದಿಗೆ ವ್ಯವಹಾರ ನಿರ್ದೇಶಕ ಮತ್ತು ರಾಜ್ಯಸಭಾ ಸಂಸದ ಪರಿಮಲ್ ನಥ್ವಾನಿ ವಿಡಿಯೋ ಹಂಚಿಕೊಂಡಿದ್ದಾರೆ.

Koo App
The fresh spell of rains cast a scenic atmosphere in the Gir Jungle. Watch how these lionesses and little cubs are enjoying the rain. #MorningFromTheWild #wildlifephotography #WildlifeWednesday #Gir #Lions #Gujarat
View attached media content
-Parimal Nathwani (@mpparimal)15 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net