More

    ರಾಷ್ಟ್ರಪತಿ ರೇಸ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ! ಅಪ್ಪ-ಮಗನಿಗೆ ದೀದಿ ಬುಲಾವ್​: ಹೆಚ್ಚಿದೆ ಕುತೂಹಲ

    ನವದೆಹಲಿ: ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಬರುವ ಜುಲೈ 24ರಂದು ಮುಗಿಯಲಿರುವ ಹಿನ್ನೆಲೆಯಲ್ಲಿ, 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಬಗ್ಗೆ ಎಲ್ಲೆಡೆ ಭಾರಿ ಕುತೂಹಲ ಮನೆಮಾಡಿದೆ.

    ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ತೃತೀಯ ರಂಗದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯ ದೇಶದ ಗಮನ ಸೆಳೆಯುತ್ತಿರುವ ವಿಷಯ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿರೋಧ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಹಲವು ಪಕ್ಷಗಳ ಮುಖ್ಯಸ್ಥರನ್ನು ಸಂಪರ್ಕಿಸಿರುವ ಅವರು ಎಲ್ಲರನ್ನೂ ಒಗ್ಗೂಡಿಸಿ ಒಂದು ಸಭೆ ಕರೆದಿದ್ದಾರೆ.

    ಕಾಂಗ್ರೆಸ್‌ ಸೇರಿದಂತೆ 22 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಈ ಸಭೆಗೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ (89) ಹಾಗೂ ಮಾಜಿ ಸಿ.ಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನು ದೀದಿ ಕರೆಸಿಕೊಂಡಿದ್ದಾರೆ. ‘ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಲು ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ಡಿ ದೇವೇಗೌಡರಿಗೆ ಹಾಗೂ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಹೀಗಾಗಿ ನಾವಿಬ್ಬರೂ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಈ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಬೆಳಗ್ಗೆ 7 ಗಂಟೆಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ದೆಹಲಿ ತೆರಳಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

    ರಾಷ್ಟ್ರಪತಿ ಹುದ್ದೆಗೆ ದೇವೇಗೌಡರ ಹೆಸರು ಕೇಳಿಬರಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಎನ್‌ಸಿಪಿ ಮುಖ್ಯಸ್ಥ 81 ವರ್ಷದ ಶರದ್ ಪವಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ ಅವರ ಹೆಸರು ಸಹ ಕೇಳಿಬರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಹ ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

    ‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

    VIDEO: ಅರೆಸ್ಟ್​ ಮಾಡಲು ನೀವ್ಯಾರು ಎಂದು ಗದರಿದ್ದ ಡಿ.ಕೆ.ಸುರೇಶ್​ ‘ಬಿಜೆಪಿ ಕಿ ಜಿಂದಾಬಾದ್’​ ಎಂದುಬಿಟ್ರು!

    ಗ್ಯಾಂಗ್​ರೇಪ್​ ಆರೋಪಿಗಳಿಗೆ ಫೈವ್​ಸ್ಟಾರ್​ ಬಿರಿಯಾನಿ? ಕಾಂಡೋಮ್​ ಬಳಸಿದ್ದವರಿಗೆ ವಿಐಪಿ ಟ್ರೀಟ್​ಮೆಂಟ್​!

    ‘ತಂಗೀ… ಗಂಡನ ಜತೆ ಮನೆಗೆ ಊಟಕ್ಕೆ ಬಾ’ ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

    ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts