

ಆನೇಕಲ್ (ಬೆಂಗಳೂರು ಗ್ರಾಮಾಂತರ): ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ದಕ್ಷಿಣದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಅವರ ಹೆಸರು ಹೇಳದೇ ಗರಂ ಆಗಿದ್ದಾರೆ ಶಾಸಕ ಎಂ.ಕೃಷ್ಣಪ್ಪ.
ಅವನ್ಯಾವನೋ ಪೋಲಿಸ್ ಇನ್ಸ್‌ಪೆಕ್ಟರ್ ಅಂತೆ. ಅಂಥ ಬಚ್ಚಾ ಇನ್ಸ್‌ಪೆಕ್ಟರ್‌ನ ಎಷ್ಟು ಜನ ನೋಡಿಲ್ಲ. ನನ್ನ ರಾಜಕೀಯ ವಯಸ್ಸು ಅವನಿಗೆ ಅಗಿಲ್ಲ. ನಾನಿನ್ನೂ ಮೂರನೇ ಕಣ್ಣು ಬಿಟ್ಟಿಲ್ಲ. ಮೂರನೇ ಕಣ್ಣು ಬಿಟ್ರೆ ಅವ ಬಳ್ಳಾರಿ, ರಾಯಚೂರು ಗುಲ್ಬರ್ಗ ಅಲೀಬೇಕು ಹಾಗೆ ಮಾಡ್ತೇನೆ ಎಂದು ಗುಡುಗಿದ್ದಾರೆ.
ರಾಜಕೀಯಕ್ಕೆ ಬರುವುದಾಗಿ ತೊಡೆತಟ್ಟಿದವನಿಗೆ ತೊಡೆಮುರಿಯೋ ತನಕ ನಿದ್ದೆ ಬರುವುದಿಲ್ಲ. ನನ್ನತ್ರ ರೌಡಿಸಂ ನಡೆಯಲ್ಲ. ನಾನೆಲ್ಲ ಮಾಡ್ಬಿಟ್ಟೆ ಎಂಎಲ್ಎ ಆಗಿ ಬಂದಿರೋದು ಎಂದು ಬಹಿರಂಗ ಸಭೆಯಲ್ಲಿ ಎಂ ಕೃಷ್ಣಪ್ಪ ರೋಷಾವೇಷ ಮೆರೆದಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಿಕಾರಿಪಾಳ್ಯ ದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಅವರು ಇನ್ಸ್‌ಪೆಕ್ಟರ್ ಹೆಸರು ಹೇಳದೇ ಗುಡುಗಿದರು. ನಾನೇನಾದ್ರೂ ಮೂರನೇ ಕಣ್ಣು ಏನಾದ್ರೂ ಬಿಟ್ಟರೆ ಪ್ರತಿದಿನ ಕೋರ್ಟು-ಕಚೇರಿ ಅಂತ ಮೆಟ್ಟಲು ಹತ್ತಬೇಕು. ಅಷ್ಟು ಈಜಿ ಅನ್ಕೋಬೇಡಿ ನನ್ನನ್ನ ಎಂದರು.
ಕೋವಿಡ್ ಸಂದರ್ಭದಲ್ಲಿ ಊರುಗಳಿಗೆ ಹೋಗಲು ಬಸ್ ಇರಲಿಲ್ಲ. ಸಮಯದಲ್ಲಿ ಬಿಎಂಟಿಸಿ ಬಸ್ ಹಾಕಿಸಿ ತುಂಬಾ ಜನಕ್ಕೆ ಉಪಯೋಗ ಮಾಡಿಕೊಟ್ಟಿದ್ದೇನೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಟ್ಟು ಐದು ರೂಪಾಯಿ ಕೆಲಸ ಮಾಡಿಲ್ಲ. ಮನೆಯಲ್ಲಿ ಇರುವವರೆಲ್ಲ ಮಾತಾಡಕ್ಕೆ ಆದರೆ, ನಾನು ಬೀದಿಲಿ ಇರೋನು ನಾನು ಎಂದರು. (ದಿಗ್ವಿಜಯ ನ್ಯೂಸ್)