More

    PSI ನೇಮಕಾತಿ ಅಕ್ರಮ: ಮಧ್ಯವರ್ತಿಯಾಗಿದ್ದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯ ಪಿಎಸ್​ಐ ಹರೀಶ್​ ಬಂಧನ

    ಬೆಂಗಳೂರು: ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್​ ಠಾಣೆಯ ಪಿಎಸ್​ಐ ಹರೀಶ್​ ಕೆ. ಎಂಬುವರನ್ನು ಬಂಧಿಸಲಾಗಿದೆ.

    ಹರೀಶ್, ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದದಿದೆ. 2019ನೇ ಬ್ಯಾಚ್​ನ ಪಿಎಸ್​ಐ ಆಗಿರುವ ಹರೀಶ್​, ನೇಮಕಾತಿ ವಿಭಾಗದ ಎಫ್​ಡಿಎ ಜೊತೆಗೆ ಸಂಪರ್ಕ ಹೊಂದಿದ್ದರು. ಹರೀಶ್​, ನಿವೃತ್ತ ಎಎಸ್​ಐ ಕೆಂಪಣ್ಣ ಅವರ ಹಿರಿಯ ಪುತ್ರ. ಅವರ ಸಹೋದರ ಪೊಲೀಸ್​ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹರೀಶ್​ ಪಿಎಸ್​ಐ ಆಗುವ ಮುನ್ನ ಎಫ್​ಡಿಎ ಆಗಿ ಕೆಲಸ ನಿರ್ವಹಿಸಿದ್ದ. ಪಿಎಸ್​ಐ ಆಗಿದ್ದುಕೊಂಡೇ ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್​ಐ ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ನಡುವೆ ಮಧ್ಯವರ್ತಿಯಾಗಿ ಅಕ್ರಮ ಎಸಗುತ್ತಿದ್ದರು ಎಂಬ ಎಂಬ ಆರೋಪ ಹರೀಶ್ ಮೇಲಿದೆ.

    ಕಳೆದ ಸೋಮವಾರವೇ ಹರೀಶ್​ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ಬಳಿಕ ಕೋರ್ಟ್​ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ಶಾಕಿಂಗ್​ ಸಂಗತಿಯೆಂದರೆ, ಈಗ ಬಂಧನವಾಗಿರುವ ಹರೀಶ್​ 2019ನೇ ಬ್ಯಾಚ್​ ಪರೀಕ್ಷೆಯಲ್ಲಿ ಹಣ ಕೊಟ್ಟು ಆಯ್ಕೆಯಾಗಿರಬಹುದಾ ಎಂಬ ಅನುಮಾನವೂ ಮೂಡಿದೆ. ಆ ನಿಟ್ಟಿನಲ್ಲೂ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಹರೀಶ್​ ಜತೆಗೆ ಎಷ್ಟು ಮಂದಿ ಅಭ್ಯರ್ಥಿಗಳು ಸಂಪರ್ಕವನ್ನು ಹೊಂದಿದ್ದರು ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಬೆಂಗಳೂರಿನಲ್ಲೇ 10ಕ್ಕೂ ಹೆಚ್ಚು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರಲ್ಲಿ ನೇಮಕಾತಿ ವಿಭಾಗದ ಸಿಬ್ಬಂದಿಯೂ ಇದ್ದಾರೆ ಹಾಗೂ ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಸೇರಿದ್ದಾರೆ. ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯು ಇದೆ. (ದಿಗ್ವಿಜಯ ನ್ಯೂಸ್​, ಬೆಂಗಳೂರು)

    ನ್ಯಾಷನಲ್​​ ಹೆರಾಲ್ಡ್​ ಪ್ರಕರಣ: ಮೂರನೇ ದಿನದ ವಿಚಾರಣೆಗೆ ಹಾಜರಾದ ರಾಹುಲ್​ ಗಾಂಧಿ

    ಮತ್ತೊಂದು ದಾಖಲೆ ಬರೆದ ಚಿನ್ನದ ಹುಡುಗ ನೀರಜ್​ ಜೋಪ್ರಾ: ಫಿನ್‌ಲ್ಯಾಂಡ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

    ಚಿತ್ರದುರ್ಗದ ಕಾಡೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ! ತುಂಬಾ ಇಷ್ಟಪಟ್ಟು ಮದ್ವೆಯಾದರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts