ಪಾಕ್​ ಯುವತಿ ಜತೆ ಮದ್ವೆಯಾದ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆಸಿದ ಕೇರಳದ M.Tech ವಿದ್ಯಾರ್ಥಿ!

Kerala Student
Published on

ತಿರುವನಂತಪುರಂ: ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿ, ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಸೇರಲು ಕೇರಳದಿಂದ ಅಫ್ಘಾನಿಸ್ತಾನಕ್ಕೆ ತೆರಳಿದ ಎಂಟೆಕ್​ ವಿದ್ಯಾರ್ಥಿ ಆತ್ಮಾಹುತಿ ದಾಳಿದಲ್ಲಿ ಮೃತಪಟ್ಟಿರುವುದಾಗಿ ಇಸ್ಲಾಮಿಕ್ ಸ್ಟೇಟ್-ಖೊರಾಸಾನ್ ಪ್ರಾಂತ್ಯ (ಐಎಸ್​ಕೆಪಿ)ದ ಮುಖವಾಣಿ ವಾಯ್ಸ್ ಆಫ್ ಖುರಾಸನ್ ತಿಳಿಸಿದೆ.

ಮೃತ ಯುವಕನನ್ನು 23 ವರ್ಷದ ನಜೀಬ್​ ಅಲ್​ ಹಿಂಡಿ ಎಂದು ಗುರುತಿಸಲಾಗಿದೆ. ಈತ ಕೇರಳದ ಮೂಲದ ಎಂಟೆಕ್​ ವಿದ್ಯಾರ್ಥಿ. ವಾಯ್ಸ್ ಆಫ್ ಖುರಾಸನ್ ಪ್ರಕಟಿಸಿರುವ ಸುದ್ದಿಯಲ್ಲಿ ಬೇರೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ನಜೀಬ್​ ಯಾವಾಗ ಮೃತಪಟ್ಟ ಮತ್ತು ಅವನ ಸಾವಿನ ಸುತ್ತಲಿನ ಸಂದರ್ಭಗಳನ್ನು ಸಹ ನಮೂದಿಸಿಲ್ಲ.

ವಾಯ್ಸ್ ಆಫ್ ಖುರಾಸನ್ ವರದಿಯ ಪ್ರಕಾರ, ನಜೀಬ್, ಐಎಸ್​ಕೆಪಿ ಇರುವ ಅಫ್ಘಾನಿಸ್ತಾನದ ಖೊರಾಸಾನ್‌ ಸೇರಲು ಭಾರತದ ಬಹುತೇಕದ ಮಾರ್ಗಗಳಲ್ಲಿ ಪ್ರಯಾಣಿಸಿದರು ಎಂದು ತಿಳಿದುಬಂದಿದೆ. ನಜೀಬ್​ನನ್ನು ಕೊಂಡಾಡಿರುವ ಐಎಸ್​ಕೆಪಿ, ನಜೀಬ್​ ಎಷ್ಟೇ ತೊಂದರೆಗಳನ್ನು ಎದುರಿಸಿದರೂ ಐಎಸ್​ಕೆಪಿ ಹೋರಾಟಗಾರನಾಗಿ ತನ್ನ ಜಿಹಾದ್ ಅನ್ನು ಮುಂದುವರಿಸಿದ್ದನು ಎಂದು ಶ್ಲಾಘಿಸಿದೆ.

ಐಎಸ್‌ಕೆಪಿ ಹೇಳುವಂತೆ ನಜೀಬ್, ಐಎಸ್‌ಗಾಗಿ ಹೋರಾಡುವುದರ ಮೇಲೆ ಮಾತ್ರ ತನ್ನ ಗಮನಹರಿಸಿದ್ದನಂತೆ. ಆತನಿಗೆ ಮದುವೆಯಾಗಲು ಇಷ್ಟವಿರಲಿಲ್ಲವಂತೆ. ಆದರೆ, ಸ್ನೇಹಿತರ ಒತ್ತಾಯದ ಮೇರೆಗೆ ಪಾಕಿಸ್ತಾನಿ ಕುಟುಂಬದ ಇನ್ನೊಬ್ಬ ಜಿಹಾದಿ ಹುಡುಗಿಯನ್ನು ಮದುವೆಯಾಗಿದ್ದಾನೆ. ಇದಾದ ಬಳಿಕವೇ ನಜೀಬ್​ನನ್ನು 'ಕುಫರ್'ಗಳ ವಿರುದ್ಧ ಆತ್ಮಹತ್ಯಾ ದಾಳಿಗೆ ಐಎಸ್​ಕೆಪಿ ಬಳಸಿಕೊಂಡಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net