ಮಹಿಳೆಯರಿಗೆ ಫ್ರೀ ಎಂಟ್ರಿ! ಬಾಡಿಗೆ ಬಂಗಲೆಯಲ್ಲಿ ಮಿಡ್​ನೈಟ್​ ರಹಸ್ಯ: ಕಾಲಿವುಡ್​ ನಟಿ ಬಂಧನ

Kavithashree
Published on

ಚೆನ್ನೈ: ಫೈವ್​ ಸ್ಟಾರ್​ ಹೋಟೆಲ್​ಗಳು ಮತ್ತು ಶ್ರೀಮಂತರಿಗೆ ಸಂಬಂಧಿಸಿದ ಐಷಾರಾಮಿ ಮನೆಗಳಲ್ಲಿ ರೇವ್​ ಪಾರ್ಟಿಗಳು ನಡೆಯುವುದು ಸಾಮಾನ್ಯ. ಆದರೆ, ಕರೊನಾ ವೈರಲ್​ ಸಾಂಕ್ರಮಿಕದಿಂದಾಗಿ ಒಟ್ಟಾಗಿ ಸೇರುವುದನ್ನು ಎಲ್ಲೆಡೆ ನಿರ್ಬಂಧಿಸಲಾಗಿದೆ. ಆದರೂ, ಕೆಲವೆಡೆ ಗುಟ್ಟಾಗಿ ರೇವ್​ ಪಾರ್ಟಿಗಳನ್ನು ನಡೆಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.

ಇದೀಗ ಚೆನ್ನೈನಲ್ಲಿ ನಟಿಯೊಬ್ಬರನ್ನು ಇದೇ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಕಣ್ಣತ್ತೂರ್​ ಏರಿಯಾದ ಐಷಾರಾಮಿ ಬಂಗಲೆಯಲ್ಲಿ ರೇವ್​ ಪಾರ್ಟಿ ನಡೆಯುತ್ತಿರುವ ಸುಳಿವು ಪಡೆದು ದಾಳಿ ನಡೆಸಿದ ಚೆನ್ನೈ ಪೊಲೀಸರು ನಟಿಯನ್ನು ಸೋಮವಾರ ಬಂಧಿಸಿದ್ದಾರೆ.

ಅರೆಬೆತ್ತಲೆ ನೃತ್ಯ ಹಾಗೂ ದುಬಾರಿ ಆಲ್ಕೋಹಾಲ್​ನೊಂದಿಗೆ 15 ಮಹಿಳೆಯರು ಮತ್ತು ಅದೇ ಸಂಖ್ಯೆಯ ಪುರುಷರು ಎಂಜಾಯ್​ ಮಾಡುತ್ತಿದ್ದರು ಎಂಬುದು ದಾಳಿಯ ವೇಳೆ ಬಹಿರಂಗವಾಗಿದೆ.

ಪಾರ್ಟಿ ನಡೆಯುತ್ತಿದ್ದ ಬಂಗಲೆಯನ್ನು ನಟಿ ಕವಿತಾಶ್ರೀ ಅವರು ಬಾಡಿಗೆ ಪಡೆದಿದ್ದಾರೆಂದು ತಿಳಿದುಬಂದಿದೆ. ಬಂಗಲೆಗಳನ್ನು ಬಾಡಿಗೆ ಪಡೆದು ಪ್ರತಿ ರಾತ್ರಿ ರೇವ್​ ಪಾರ್ಟಿ ನಡೆಸುತ್ತಿದ್ದರು ಎಂಬ ಆರೋಪವಿದೆ. ಪಾರ್ಟಿಗಳಿಗೆ ಮಹಿಳೆಯರಿಗೆ ಉಚಿವ ಪ್ರವೇಶವನ್ನು ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ನಟಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಕವಿತಾಶ್ರೀ ಅವರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್​ ನಿರ್ದೇಶನದ ಮತ್ತು ಪ್ರಭುದೇವ್​ ಅಭಿನಯದ ಕಾದಲನ್ ಚಿತ್ರದಲ್ಲಿ ಕವಿತಾಶ್ರೀ ಅವರು ನಟಿಸಿದ್ದಾರೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net