More

    ‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’

    ಮುಂಬೈ: ಬ್ಲೂ ಫಿಲ್ಮ್ ಕೇಸ್​ನಲ್ಲಿ ಬಂಧನವಾಗಿರುವ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಪರ ವಕೀಲರು ಪ್ರಕರಣದಲ್ಲಿ ಪೊಲೀಸರ ನಡೆಯನ್ನೇ ಟೀಕಿಸಿದ್ದಾರೆ. ಪೋರ್ನೊಗ್ರಫಿಕ್​ ಸಿನಿಮಾ ಅಥವಾ ವೆಬ್​ ಸರಣಿಯನ್ನು ಅಶ್ಲೀಲ ಎಂದು ವರ್ಗೀಕರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ರಾಜ್​ ಕುಂದ್ರಾ ಪರ ವಕೀಲರಾದ ಅಬ್ಯಾಡ್​ ಪಾಂಡ ಎಂಬುವರು ವಕಾಲತ್ತು ವಹಿಸಿದ್ದಾರೆ. ಮಂಗಳವಾರ ತಮ್ಮ ಕಕ್ಷಿದಾರನ ಪರ ವಕೀಲರು ವಾದ ಮಂಡಿಸಿದರು. ಅಶ್ಲೀಲ ವಸ್ತುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಬರುವುದಿಲ್ಲ. ಪ್ರಕರಣದಲ್ಲಿ ಐಟಿ ಸೆಕ್ಷನ್​ ಅನ್ವಯಿಸಿರುವುದು ತಪ್ಪಾಗಿದೆ. ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯಲ್ಲಿನ ಸೆಕ್ಷನ್​ಗಳ ಪ್ರಕಾರ “ನಿಜವಾದ ಸಂಭೋಗ” ವನ್ನು ಅಶ್ಲೀಲವೆಂದು ಪರಿಗಣಿಸಲಾಗುತ್ತದೆ ಹೊರತು ಉಳಿದದ್ದನ್ನು ಕೇವಲ ಅಶ್ಲೀಲ ವಿಷಯ ಎಂದು ಕಾನೂನಿನಲ್ಲಿ ಪರಿಗಣಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.

    ಐಪಿಸಿ ಸೆಕ್ಷನ್​ ಜತೆ ಐಟಿ ಕಾಯ್ದೆ ಸೆಕ್ಷನ್​ಗಳನ್ನು ಸೇರಿಸುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಪೊಲೀಸರು ಅದೇ ಕೆಲಸ ಮಾಡಿದ್ದಾರೆಂದು ಪೊಲೀಸರು ಕ್ರಮವನ್ನು ಪಾಂಡ ಅವರು ಟೀಕಿಸಿದ್ದಾರೆ.

    ಸುಮಾರು 4 ಗಂಟೆಗಳ ವಿಚಾರಣೆ ಬಳಿಕ ಜುಲೈ 19ರಂದು ಮುಂಬೈ ಅಪರಾಧ ವಿಭಾಗದ ಪೊಲಿಸರು ಉದ್ಯಮಿ ಹಾಗೂ ಖ್ಯಾತಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾರನ್ನು ಬಂಧಿಸಿದ್ದಾರೆ. ನೀಲಿ ಚಿತ್ರಗಳನ್ನು ಸೆರೆಹಿಡಿದು ಭಾರತದ ಹೊರಗೆ ಲಭ್ಯವಿರುವ ಅನೇಕ ಪೇಯ್ಡ್​ ಆ್ಯಪಗಳಲ್ಲಿ ಅಪ್​ಲೋಡ್​ ಮಾಡಿರುವುದರ ವಿರುದ್ಧ ಫೆಬ್ರವರಿ 4ರಂದು ದಾಖಲಾಗಿರುವ ದೂರಿನ ಆಧಾರದ ಮೇಲೆ ಕುಂದ್ರಾ ಬಂಧನವಾಗಿದೆ. ಸದ್ಯ ಆರೋಪಿ ಕುಂದ್ರಾರನ್ನು ಮುಂಬೈನ ಮೆಟ್ರೋಪಾಲಿಟನ್​ ಕೊರ್ಟ್​ ಜುಲೈ 23ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಿದೆ.

    ಈ ಪ್ರಕರಣದಲ್ಲಿ ಈವರೆಗೆ 11 ಜನರನ್ನು ಬಂಧಿಸಲಾಗಿದೆ. ತಮ್ಮ ಕಂಪನಿಯ ಐಟಿ ನೋಡಿಕೊಳ್ಳುತ್ತಿದ್ದ ಶ್ರೀ ಕುಂದ್ರಾ ಅವರ ಆಪ್ತ ಸಹಾಯಕ ರಿಯಾನ್ ಥಾರ್ಪ್ ಅವರನ್ನು ಮಂಗಳವಾರ ಬಂಧಿಸಲಾಗಿದೆ. (ಏಜೆನ್ಸೀಸ್​)

    ಬ್ಲೂ ಫಿಲ್ಮ್​ ದಂಧೆಯಲ್ಲಿ ರಾಜ್​ ಕುಂದ್ರಾ ಸಿಕ್ಕಿಬಿದ್ದಿದ್ಹೇಗೆ? ಮುಂಬೈನ ಕರಾಳ ಲೋಕ ಬಿಚ್ಚಿಟ್ಟ ಪೊಲೀಸ್​ ಆಯುಕ್ತ!

    ಸಾಕಪ್ಪ ಸಾಕು ರಾಜ್​ ಕುಂದ್ರಾ ಸಹವಾಸ: 2019ರಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಪೂನಂ ಪಾಂಡೆ..!

    ವೆಬ್​ ಸರಣಿಯಲ್ಲಿ ನಟಿಸುವುದಾದ್ರೆ ಹೀಗೆ ಮಾಡಿ! ನಟಿಗೆ ಓಪನ್​ ಆಫರ್​ ಕೊಟ್ಟಿದ್ರಂತೆ ರಾಜ್​ ಕುಂದ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts