ವೆಬ್​ ಸರಣಿಯಲ್ಲಿ ನಟಿಸುವುದಾದ್ರೆ ಹೀಗೆ ಮಾಡಿ! ನಟಿಗೆ ಓಪನ್​ ಆಫರ್​ ಕೊಟ್ಟಿದ್ರಂತೆ ರಾಜ್​ ಕುಂದ್ರಾ

Sagarica
Published on

ಮುಂಬೈ: ನೀಲಿ ಚಿತ್ರದ ದಂಧೆಯಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಂಧನವಾಗುತ್ತಿದ್ದಂತೆ ಅವರ ವಿರುದ್ಧ ಒಂದೊಂದೆ ಆರೋಪಗಳು ಹೊರಬರುತ್ತಿವೆ. ಇದೀಗ ಮಾಡೆಲ್​ ಕಂ ನಟಿ ಸಾಗರಿಕ ಸೋನಾ ಸುಮನ್​ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ ಕುಂದ್ರಾ ನಿರ್ಮಾಣದ ವೆಬ್​ ಸರಣಿಯಲ್ಲಿ ನಟಿಸಲು ನನಗೆ ಉಮೇಶ್​ ಕಾಮತ್​ ಎಂಬುವರು ಕರೆ ಮಾಡಿದ್ದರು. ವಿಡಿಯೋ ಕಾಲ್​ನಲ್ಲಿ ಬೆತ್ತಲೆ ಆಡಿಷನ್​ ನೀಡುವಂತೆ ಕೇಳಿದ್ದರು ಎಂದು ಸಾಗರಿಕ ಆರೋಪಿಸಿದ್ದಾರೆ.

ಬ್ಲೂಫಿಲ್ಮ್​ ದಂಧೆಯಲ್ಲಿ ಉಮೇಶ್​ ಕಾಮತ್​ ಕೂಡ ಮುಂಬೈ ಪೊಲೀಸರಿಂದ ಬಂಧನವಾಗಿದ್ದಾರೆ. ಕಾಮತ್​, ರಾಜ್​ ಕುಂದ್ರಾ ಕಂಪನಿಯ ಮಾಜಿ ಉದ್ಯೋಗಿ. ಮಾಡೆಲ್​ ಕಂ ನಟಿ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ಗೆಹ್ನಾ ವಸಿಸ್ಟ್​ ನೀಡಿದ 8 ಅಶ್ಲೀಲ ವಿಡಿಯೋಗಳನ್ನು ಆ್ಯಪ್​ನಲ್ಲಿ ಅಪ್​ಲೋಡ್​ ಮಾಡಿದ ಆರೋಪ ಕಾಮತ್​ ಮೇಲಿದೆ.

ಯುಕೆ ಪ್ರೊಡಕ್ಷನ್​ ಕಂಪನಿ ಕೆನ್ರಿನ್​ನಲ್ಲಿ ರಾಜ್​ ಕುಂದ್ರಾ ಪಾಲು ಇರುವುದು ಬೆಳಕಿಗೆ ಬಂದಿದ್ದು, ಆ ಕಂಪನಿಯಲ್ಲಿ ಕಾಮತ್​ ಕೆಲಸ ಮಾಡುತ್ತಿದ್ದರು. ಇನ್ನು ಪ್ರಕರಣದಲ್ಲಿ ಗೆಹ್ನಾ ವಸಿಸ್ಟ್​ ಜಾಮೀನಿನ ಮೇಲೆ ಹೊರಗಿದ್ದಾರೆ. ಗೆಹಾನಾ ವಸಿಸ್ಟ್​ ಬಂಧನವಾದ ಬಳಿಕ, ಫೆಬ್ರವರಿಯಲ್ಲಿ ಮಾಡೆಲ್​ ಕಂ ನಟಿ ಸಾಗರಿಕ ಸೋನಾ ಸುಮನ್ ಮಾತನಾಡಿ, ರಾಜ್​​ ಕುಂದ್ರಾ ಬೆತ್ತಲೆ ಆಡಿಷನ್​ಗೆ ನನ್ನನ್ನು ಕೇಳಿದ್ದರು ಎಂದು ಆರೋಪಿಸಿದ್ದಾರೆ.

ಇದೀಗ ಸಾಗರಿಕಾ ಹೇಳಿಕೆ ದಾಖಲಿಸಿಕೊಳ್ಳಲು ಮುಂಬೈ ಪೊಲೀಸರು ನೋಟಿಸ್​ ನೋಡಿದ್ದಾರೆ. ಆದರೆ, ಆಕೆ ವಿಚಾರಣೆಗೆ ಹಾಜರಾಗಿಲ್ಲ. ಒಂದು ವೇಳೆ ಆಕೆ ಮುಂದೆ ಬಂದರೆ ಹೇಳಿಕೆಯನ್ನು ದಾಖಲಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net