More

    ಶರಣರ ಆದರ್ಶ ಅಳವಡಿಸಿಕೊಳ್ಳೋಣ; ಎ.ಆರ್. ಹೆಗ್ಗನದೊಡ್ಡಿ

    ವಿಜಯಪುರ: ಜಾತಿ ತಾರತಮ್ಯ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರ ಆದರ್ಶಗಳನ್ನು ಸರ್ವರೂ ಅಳವಡಿಸಿಕೊಳ್ಳಬೇಕೆಂದು ಸಿಂದಗಿಯ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಹೇಳಿದರು.

    ನಗರದ ಕಸಾಪ ಸಭಾಭವನದಲ್ಲಿ ಶನಿವಾರ ಅನ್ನಪೂರ್ಣ ಮಹಾದೇವಪ್ಪ ಕಾಗಲಕರ ನೀಡಿದ ದಿ.ಭೀಮಕ್ಕ ರಾಮಚಂದ್ರ ಕಾಗಲಕರ ದತ್ತಿ ಹಾಗೂ ಶಾಂತಾಬಾಯಿ ಸುಖಾರಾಮ್ ನೂಲಿಕರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ವಚನ ಸಾಹಿತ್ಯ ಜನಸಾಮಾನ್ಯರಿಗೂ ಅರ್ಥವಾಗುವಂತಹದ್ದು. ಕಾಯಕದಲ್ಲಿ ನಿರತನಾಗಿರಬೇಕು. ಹುಸಿ ಹೇಳದೆ ಸತ್ಯ ಪ್ರತಿಪಾದಿಸಬೇಕು. ಸಮಾಜ ಸುಧಾರಣೆ ವಚನದ ಆಶಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಪ್ರಗತಿಪರ ಸಮಾಜದ ನಿರ್ಮಾಣವೇ ವಚನ ಸಾಹಿತ್ಯದ ಗುರಿ. ಶ್ರದ್ಧೆಯಿಂದ ಮಾಡಿದ ಕಾಯಕ ಪೂಜೆಗಿಂತ ಶ್ರೇಷ್ಠ. ಇಂದು ವಚನ ಸಾಹಿತ್ಯ ಸುಂದರ ಬದುಕಿನ ಸಾಹಿತ್ಯವಾಗಿದೆ ಎಂದರು.

    ಶರಣರ ವಚನ ಸಾಹಿತ್ಯ ಕುರಿತು ಮಮತಾ ಮುಳಸಾವಳಗಿ ಉಪನ್ಯಾಸ ನೀಡುತ್ತಾ, ಪ್ರಬುದ್ಧತೆಯ ಮಹೋನ್ನತ ಶಿಖರ ವಚನ ಸಾಹಿತ್ಯ. ವಚನವೆಂದರೆ ಹುಸಿಯಾಗದ ಮಾತು. ಕನ್ನಡ ವಚನ ಸಾಹಿತ್ಯ ವಿಶ್ವಕ್ಕೆಲ್ಲ ನೀಡಿದ ಕೊಡುಗೆ. ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಸಂವಾದವೇ ವಚನ ಎಂದರು.

    ಚೈತನ್ಯ ಮುದ್ದೇಬಿಹಾಳ ಉಪನ್ಯಾಸ ನೀಡುತ್ತಾ, ಬಸವಣ್ಣ ಬಿತ್ತಿದ ಬೀಜಗಳು ನಾವು. ನಮಗಿರದು ಎಂದೆಂದು ಸಾವು. ಕಾಯಕವೇ ಕೈಲಾಸದಲ್ಲಿ ನಂಬಿಕೆಯಿಟ್ಟು ಗೌರವದಿಂದ ಬದುಕಿದವರು ಶರಣರು. ಸತ್ಯ, ಶುದ್ಧ ಕಾಯಕವೇ ಶ್ರೇಷ್ಠ ಎಂದರು.

    ಇಂಡಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಯಶ್ರೀ ತೆಲಗ, ವಿಜಯಲಕ್ಷ್ಮಿ ಡಿಸಲೆ, ರಜೀಯಾ ಚಪ್ಪರಬಂದ, ರಾಜಶ್ರೀ ನಾರಾಯಣಕರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

    ರೇಣುಕಾ ತಳವಾರ, ಡಾ.ಸುರೇಶ ಕಾಗಲಕರರಡ್ಡಿ, ಧರೆಪ್ಪ ಯಚ್ಚಿ, ರಾಜೇಸಾಬ ಶಿವನಗುತ್ತಿ, ಹಾಸಿಂಪೀರ ವಾಲಿಕಾರ, ಕಮಲಾ ಮುರಾಳ, ಜಿ.ಎಸ್. ಬಳ್ಳೂರ, ಅಹಮ್ಮದ ವಾಲಿಕಾರ, ಅರ್ಜುನ ಶಿರೂರ, ಶಾಂತಾ ವಿಭೂತಿ, ಸುರಭಿ ತೆಲಗ, ದ್ಯಾಮಪ್ಪ ಗರಸಂಗಿ, ಎಸ್.ಎಸ್. ಕುಂಬಾರ, ಎಸ್.ವೈ. ತುದಿಗಾಲ್, ಎಸ್. ಎಸ್. ಬೇಟಗೇರಿ, ಭಾಗೀರತಿ ಸಿಂಧೆ, ಕೆ.ಎಸ್. ಹಣಮಾನಿ, ಟಿ.ಆರ್. ಹಾವಿನಾಳ, ಎಸ್.ಬಿ. ಕಲಕೇರಿ, ಎಂ.ಎನ್. ನಿಂಬಾಳ ಮತ್ತಿತರರಿದ್ದರು.

    ಸುನಂದಾ ಕೋರಿ ಪ್ರಾರ್ಥಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಜತ್ತಿ ಸ್ವಾಗತಿಸಿದರು. ಶೋಭಾ ಬಡಿಗೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts