ಪ್ರೇಯಸಿ ಜತೆಗಿನ ಸಂಭೋಗದ ವೇಳೆ ಗುಪ್ತಾಂಗಕ್ಕೆ ಗಮ್​ ಅಂಟಿಸಿಕೊಂಡ ಪ್ರಿಯಕರ: ಮುಂದಾಗಿದ್ದು ದುರಂತ

Gum
Published on

ಗುಜರಾತ್​: ಪ್ರೇಯಸಿ ಜತೆ ಲೈಂಗಿಕ ಸಂಭೋಗ ನಡೆಸುವಾಗ ಆಕೆ ಗರ್ಭಿಣಿ ಆಗುವುದನ್ನು ತಡೆಯಲೆಂದು ಪ್ರಿಯಕರ ತನ್ನ ಗುಪ್ತಾಂಗಕ್ಕೆ ಗಮ್​ ಹಾಕಿ ಅಂಟಿಸಿಕೊಂಡು ಮೃತಪಟ್ಟಿರುವ ವಿಚಿತ್ರ ಪ್ರಸಂಗ ಗುಜರಾತಿನ ಅಹಮದಾಬಾದ್​ನಲ್ಲಿ ನಡೆದಿದೆ.

ಫತೇಹವಾಡಿ ಏರಿಯಾದ ಸಲ್ಮಾನ್​ ಮಿರ್ಜಾ (25) ತನ್ನ ಗರ್ಲ್​ಫ್ರೆಂಡ್​ ಜತೆ ಜೂನ್​ 22ರಂದು ಜುಹಾಪುರಾದ ಏರಿಯಾದಲ್ಲಿರುವ ಹೋಟೆಲ್​ ಒಂದಕ್ಕೆ ತೆರಳಿದ್ದಾನೆ. ಡ್ರಗ್ಸ್​ ವ್ಯಸನಿಯಾಗಿದ್ದ ಇಬ್ಬರು ಅದೇ ಅಮಲಿನಲ್ಲಿ ಲೈಂಗಿಕ ಸಂಭೋಗ ನಡೆಸಲು ಬಯಸಿದ್ದರು. ಆದರೆ, ಕಾಂಡೋಮ್​ ಸಿಗದಿದ್ದಾಗ ಬಾಯ್​ಫ್ರೆಂಡ್​ ತನ್ನ ಗುಪ್ತಾಂಗಕ್ಕೆ ಗಮ್​ ಅಂಟಿಕೊಂಡಿದ್ದಾನೆ.

ಮರುದಿನ ಬೆಳಗ್ಗೆ ಮಿರ್ಜಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆರೋಗ್ಯ ಹದಗೆಟ್ಟಿದ್ದರಿಂದ ಗಾಬರಿಗೊಂಡ ಆತನ ಗರ್ಲ್​ಫ್ರೆಂಡ್​ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಇದಾದ ಬಳಿಕ ಜೂನ್​ 25ರಂದು ಮಿರ್ಜಾ ಸಂಬಂಧಿಯೊಬ್ಬ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕರಾರ ಗುಪ್ತಾಂಗಕ್ಕೆ ಗಮ್​ ಅಂಟಿಸಿಕೊಂಡಿದ್ದರಿಂದ ಆತ ಮೃತಪಟ್ಟಿದ್ದಾನೆಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net